Connect with us

    DAKSHINA KANNADA

    ಜಗದೀಶ್ ಕಾರಂತರ ಮೇಲಿನ ಪಿಎಫ್ಐ ದೂರಿನ ಹಿಂದೆ ಸಂಪ್ಯ ಠಾಣಾಧಿಕಾರಿ ಪಿತೂರಿ-ಹಿಂಜಾವೇ ಆರೋಪ.

    ಜಗದೀಶ್ ಕಾರಂತರ ಮೇಲಿನ ಪಿಎಫ್ಐ ದೂರಿನ ಹಿಂದೆ ಸಂಪ್ಯ ಠಾಣಾಧಿಕಾರಿ ಪಿತೂರಿ-ಹಿಂಜಾವೇ ಆರೋಪ.

    ಪುತ್ತೂರು,ಸೆಪ್ಟಂಬರ್ 28: ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಮೇಲೆ ಪಿಎಫ್ಐ ಮುಖಾಂತರ ಕೇಸು ದಾಖಲಿಸುವುದರ ಹಿಂದೆ ಸಂಪ್ಯ ಪೋಲೀಸ್ ಠಾಣಾಧಿಕಾರಿ ಅಬ್ದು ಖಾದರ್ ಕೈವಾಡವಿದೆ ಎಂದು ಹಿಂದೂ ಜಾಗರಣ ವೇದಿಕೆಯ ರತ್ನಾಕರ ಅಡ್ಯಂತಾಯ ಆರೋಪಿಸದ್ದಾರೆ. ಪುತ್ತೂರಿನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆ ನಡೆದು ಒಂದು ವಾರದ ಬಳಿಕ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಪಿಎಫ್ಐ ನ ಮುಖಂಡ ಜಗದೀಶ್ ಕಾರಂತರ ವಿರುದ್ಧ ಪ್ರಕರಣ ದಾಖಲಿಸುತ್ತಾರೆ. ಪಿಎಫ್ಐ ಗೆ ಪ್ರಕರಣ ದಾಖಲಿಸಲು ಕುಮ್ಮಕ್ಕು ನೀಡಿರುವುದೇ ಈ ಠಾಣೆಯ ಎಸ್.ಐ ಎಂದ ಅವರು ಇದಕ್ಕೆ ದಾಖಲೆ ಬೇಕಾದಲ್ಲಿ ಅಧಿಕಾರಿಯ ಮೊಬೈಲ್ ಸಂಭಾಷಣೆಯ ರೆಕಾರ್ಡ್ ಗಳನ್ನು ಪರಿಶೀಲಿಸಿದರೆ ಮೇಲಾಧಿಕಾರಿಗಳಿಗೆ ಈ ವಿಷಯ ಸ್ಪಷ್ಟವಾಗುತ್ತದೆ ಎಂದರು. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೂ ಜಾಗರಣ ವೇದಿಕೆಯ ಮುಖಂಡರನ್ನು ಗುರಿಯಾಗಿಸಿಕೊಂಡು ಕೇಸು ದಾಖಲಿಸಲಾಗುತ್ತಿದೆ ಎಂದ ಅವರು 2009 ರಿಂದ 2017 ರ ವರೆಗೆ ಯಾವುದೇ ಕೇಸು ಇಲ್ಲದ ಹಿಂದೂ ಜಾಗರಣ ವೇದಿಕೆಯ ಮುಖಂಡ ಕಲ್ಲಡ್ಕ ರತ್ನಾಕರ ಶೆಟ್ಟಿ ಮೇಲೆ ರೌಡಿ ಶೀಡರ್ ಪಟ್ಟ ಕಟ್ಟಿದೆ. ಇದೀಗ ಅವರನ್ನು ಗಡಿಪಾರು ಮಾಡಲು ಜಿಲ್ಲಾಡಳಿತ ಆದೇಶ ಮಾಡಿದೆ. ಇದು ಸರಕಾರದ ಹಿಂದೂ ವಿರೋಧಿ ನೀತಿಯಾಗಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಕಾನೂನಾತ್ಮಕ ಹೋರಾಟವನ್ನು ಸಂಘಟನೆ ನಡೆಸಿಕೊಂಡು ಬರುತ್ತಿದೆ. ಇದೇ ಕಾರಣಕ್ಕಾಗಿ ಇದೀಗ ಪೋಲೀಸ್ ಇಲಾಖೆಯ ಮೂಲಕ ಕಂಡಕಂಡವರ ಮೇಲೆ ಕೇಸು ದಾಖಲಿಸುತ್ತಿದೆ ಎಂದು ಅವರು ಆರೋಪಿಸಿದರು. ಕಾನೂನುಬಾಹಿರವಾಗಿರುವ ಈ ವ್ಯವಸ್ಥೆಗಳನ್ನು ವಿರೋಧಿಸಿ ಅಕ್ಟೋಬರ್ 9 ರಂದು ಹಿಂದೂ ಸಂಘಟನೆಗಳು ಮಂಗಳೂರು ಚಲೋ ಕಾರ್ಯಕ್ರಮದ ಮೂಲಕ ಪ್ರತಿಭಟನೆ ನಡೆಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಹಿಂಜಾವೇ ಪದಾಧಿಕಾರಿಗಳಾದ ರವಿ ಕುಮಾರ್ ಕಲ್ಲಡ್ಕ, ಸುಭಾಷ್ ಪಡೀಲ್, ಸಚಿನ್ ಪಾಪೆಮಜಲು ಹಾಗೂ ಅಜಿತ್ ಕುಮಾರ್ ಹೊಸಮೂಲೆ ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply