Connect with us

DAKSHINA KANNADA

ಪುತ್ತೂರು – ಅರಣ್ಯ ಸಂಚಾರಿದಳದ ಕಾರ್ಯಾಚರಣೆ ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸಿದ ಆರೋಪಿ ಆರೆಸ್ಟ್

ಪುತ್ತೂರು ಅಗಸ್ಟ್ 03: ಪುತ್ತೂರು ಅರಣ್ಯ ಸಂಚಾರಿದಳದ ತಂಡ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಜಿಂಕೆ ಚರ್ಮ ಮಾರಾಟ ಯತ್ನ ಪ್ರಕರಣವನ್ನು ಪತ್ತೆ ಹಚ್ಚಿ ಒರ್ವನನ್ನು ಬಂಧಿಸಿದ್ದಾರೆ.


ಬಂಧಿತನನ್ನು ಬೆಳಗಾವಿಯ ಹನುಮಂತ ಎಂದು ಗುರುತಿಸಲಾಗಿದೆ. ಈತ ಬೆಳಗಾವಿಯಿಂದ ಖಾಸಗಿ ಬಸ್ ಮೂಲಕ ಬಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸಿದ್ದು, ಖಚಿತ ಮಾಹಿತಿಯನ್ನು ಆಧರಿಸಿ ಪುತ್ತೂರು ಅರಣ್ಯ ಸಂಚಾರಿದಳದ ಎಸ್.ಐ. ಜಾನಕಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಜಿಂಕೆ ಚರ್ಮ ಮಾರಾಟ ಮಾಡಲು ಗಿರಾಕಿಗಾಗಿ ಕಾಯುತ್ತಿದ್ದ ಬೆಳಗಾವಿಯ ಹನುಮಂತ(31ವ) ಎಂಬಾತನನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಜಿಂಕೆ ಚರ್ಮ ವಶಕ್ಕೆ ಪಡೆದಿದೆ. ಬಂಧಿತ ಹನುಮಂತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.