Connect with us

    DAKSHINA KANNADA

    ಪರವಾನಿಗೆ ಹೊಂದಿದ ಆಯುಧಗಳನ್ನು ಎ.13ರ ಮೊದಲು ಠೇವಣಿ ಇರಿಸಲು ದ.ಕ. ಜಿಲ್ಲಾಧಿಕಾರಿಯಿಂದ ಪರಿಷ್ಕೃತ ಆದೇಶ

    ಮಂಗಳೂರು, ಎಪ್ರಿಲ್ 11: ರಾಜ್ಯ ವಿಧಾನಸಭಾ ಚುನಾವಣೆ ಸಂಬಂಧಿಸಿ  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಸುವ ಉದ್ದೇಶದಿಂದ ಪರವಾನಿಗೆ ಹೊಂದಿದ ಆಯುಧಗಳನ್ನು ಎ.13ರ ಒಳಗಾಗಿ ಠೇವಣೆ ಮಾಡಲು ಜಿಲ್ಲಾಧಿಕಾರಿ ರವಿಕುಮಾರ್ ಎಂ. ಆರ್ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

    ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಭಾರತೀಯ ಶಸ್ತ್ರಾಸ್ತ್ರ ಕಾಯಿದೆ 1959ರ ಕಲಂ 17 (3) (ಬಿ) ರನ್ವಯ, 2023 ,ಮಾ.30ರಂದು ಹೊರಡಿಸಿದ ಆದೇಶದಲ್ಲಿ ಜಿಲ್ಲೆಯಲ್ಲಿರುವ ಬೆಳೆ ರಕ್ಷಣೆ ಹಾಗೂ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿರುವ ಪರವಾನಿಗೆದಾರರು ತಮ್ಮ ಬಳಿಯಿರುವ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರಲ್ಲಿ 2023 ,ಎ.24ರ ಒಳಗಾಗಿ ಜಮಾ ಮಾಡಲು ಆದೇಶಿಸಿದ್ದರು.

    ಈ ಆದೇಶವನ್ನು ಮಾರ್ಪಡಿಸಿ ಎ.6ರಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಪರಿಷ್ಕೃತ  ಆದೇಶವನ್ನು ಹೊರಡಿಸಿದ್ದು, ಈ  ಆದೇಶದಲ್ಲಿ ಬೆಳೆ ಹಾಗೂ ಆತ್ಮರಕ್ಷಣೆ ಆಯುಧಗಳ ಪರವಾನಿಗೆದಾರರು ತಮ್ಮ ಆಯುಧಗಳನ್ನು ಪೊಲೀಸ್ ಠಾಣೆ ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ಥರಲ್ಲಿ ಎ. 13ರ ಒಳಗಾಗಿ ಠೇವಣೆ ಇರಿಸುವಂತೆ ಆದೇಶಿಸಿದ್ದಾರೆ.

    ಅದರಂತೆ ಜಿಲ್ಲೆಯ ಎಲ್ಲ ಆಯುಧಗಳ ಪರವಾನಿಗೆದಾರರು ನಿಗದಿತ ದಿನಾಂಕದ  ಒಳಗಾಗಿ ತಮ್ಮ ಬಳಿಯಿರುವ ಆಯುಧ/ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಜಮಾ ಮಾಡಿ ರಶೀದಿಗಳನ್ನು ಪಡೆದುಕೊಳ್ಳುವುದು ಅಥವಾ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಸ್ತ್ರರಲ್ಲಿ ಜಮಾ ಮಾಡಿ ಈ ಬಗ್ಗೆ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡುವುದು. ಇದಕ್ಕೆ ತಪ್ಪಿದಲ್ಲಿ ಸೂಕ್ತ ಕಾನೂನುಕ್ರಮವನ್ನು ಕೈಗೊಳ್ಳಲಾಗುವುದು. ಆದುದರಿಂದ   ಜಿಲ್ಲೆಯಲ್ಲಿರುವ ಶಸ್ತ್ರಾಸ್ತ್ರ, ಪರವಾನಿಗೆದಾರರು ಈ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ಅಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *