KARNATAKA
ಪನ್ನೀರ್ ಪ್ರಿಯರಿಗೆ ಆಹಾರ ಇಲಾಖೆ ಬಿಗ್ ಶಾಕ್: ಪನ್ನೀರ್ ನಲ್ಲಿ ಬ್ಯಾಕ್ಟಿರಿಯಾ ಅಂಶ ಪತ್ತೆ

ಬೆಂಗಳೂರು, ಮಾರ್ಚ್ 26: ಇಡ್ಲಿ ಹಾಗೂ ಹಸಿರು ಬಟಾಣಿಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ಬೆನ್ನಲ್ಲೇ ಇದೀಗ ಆಹಾರ ಇಲಾಖೆ ಪನ್ನೀರ್ ಪ್ರಿಯರಿಗೂ ಬಿಗ್ ಶಾಕ್ ನೀಡಿದೆ. ಪನ್ನೀರ್ ಸ್ಯಾಂಪಲ್ ಟೆಸ್ಟ್ ವೇಳೆ ಬ್ಯಾಕ್ಟಿರಿಯ ಅಂಶ ಪತ್ತೆಯಾಗಿದ್ದು, ಪನ್ನೀರ್ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಬಯಲಾಗಿದೆ.
ಆಹಾರ ಇಲಾಖೆ ಕಳಪೆ ಆಹಾರಗಳ ವಿರುದ್ಧ ಸಮರ ಮುಂದುವರೆಸಿರುವ ಬೆನ್ನಲ್ಲೇ ಇದೀಗ ಪನ್ನೀರ್ ಸ್ಯಾಂಪಲ್ ಟೆಸ್ಟ್ ಮಾಡಿದೆ. ಆಹಾರ ಇಲಾಖೆ 231 ಪನ್ನೀರ್ ಸ್ಯಾಂಪಲ್ ಸಂಗ್ರಹಿಸಿ ಗುಣಮಟ್ಟ ಪರೀಕ್ಷೆ ನಡೆಸಿದೆ. ಈ ವೇಳೆ ಪನ್ನೀರ್ ನಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಬ್ಯಾಕ್ಟಿರಿಯಾ ಅಂಶ ಪತ್ತೆಯಾಗಿದೆ.

231 ಪನ್ನೀರ್ ಸ್ಯಾಂಪಲ್ ಗಳ ಪೈಕಿ 17 ಸ್ಯಾಂಪಲ್ ಗಳ ವರದಿ ಬಂದಿದ್ದು, ಎರಡು ಸ್ಯಾಂಪಲ್ ಗಳು ಅನ್ ಸೇಫ್ ಎಂದು ಬಂದಿದೆ. ಇದರಲ್ಲಿ ಬ್ಯಾಕ್ಟಿರಿಯಾ ಪತ್ತೆಯಾಗಿದೆ. ಉಳಿದ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ. ಇದೇ ವೇಳೆ ಆಹಾರ ಇಲಾಖೆ ಐಸ್ ಕ್ರೀಂ ಘಟಕಗಳಲ್ಲಿಯೂ ಸ್ಯಾಂಪಲ್ ಸಂಗ್ರಹ ಮಾಡಿದೆ. ಬೆಂಗಳೂರಿನ ವಿವಿಧ ಐಸ್ ಕ್ರೀಂ ಘಟಕಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಸ್ಯಾಂಪಲ್ ಸಂಗ್ರಹಿಸಿ ಲ್ಯಾಬ್ ಗೆ ಕಳುಹಿಸಿದ್ದಾರೆ.