Connect with us

LATEST NEWS

ಕರಾವಳಿ ಜನಪ್ರತಿನಿಧಿಗಳಿಂದ #FlyFromIXE ಅಭಿಯಾನಕ್ಕೆ ವ್ಯಕ್ತವಾಗದ ಬೆಂಬಲ

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ದಿಗಾಗಿ ನಿನ್ನೆ ಹಮ್ಮಿಕೊಂಡಿದ್ದ ಟ್ವಿಟರ್ ಅಭಿಯಾನ (#FlyFromIXE) ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಟ್ಟರೆ ಕರಾವಳಿಯ ಯಾವ ಜನಪ್ರತಿನಿಧಿಗಳು ಈ ಅಭಿಯಾನಕ್ಕೆ ಬೆಂಬಲ ನೀಡದೆ ಇರುವುದು ಕರಾವಳಿಗರಲ್ಲಿ ಬೆಸರಮೂಡಿಸಿದೆ.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಅಭಿವೃದ್ಧಿ ಸಾಮರ್ಥ್ಯವನ್ನು ಉನ್ನತೀಕರಣಗೊಳಿಸಬೇಕು ಎಂಬ ಹಕ್ಕೊತ್ತಾಯದೊಂದಿಗೆ 12 ಗಂಟೆಗಳ ಟ್ವಿಟರ್ ಅಭಿಯಾನ ಫ್ಲೈಫ್ರಂಐಎಕ್ಸ್‌ಇ(#FlyFromIXE)ಯನ್ನು ನಿನ್ನೆ ನಡೆಸಲಾಗಿದೆ ಸುಮಾರು 1000ಕ್ಕೂ ಮಂದಿ ಈ ಹ್ಯಾಷ್‌ಟ್ಯಾಗ್ ಸಹಿತ ಟ್ವೀಟ್ ಮಾಡಿ ಮಂಗಳೂರು ವಿಮಾನ ನಿಲ್ದಾಣದ ಅಭಿವೃದ್ಧಿಗೆ ಒತ್ತಾಯಿಸಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದ ಮೂಲಸೌಲಭ್ಯಗಳನ್ನು ಸರ್ವಾಂಗೀಣ ಅಭಿವೃದ್ಧಿಪಡಿಸಬೇಕು ಎಂಬುದಕ್ಕಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ, ಇದು ಸಾಕಷ್ಟು ಟ್ರೆಂಡ್ ಆಗಿತ್ತು.


ವಿಮಾನಗಳ ಇಂಧನ ಮೇಲಿನ ಶೇ.28ರಷ್ಟು ಮೌಲ್ಯವರ್ಧಿತ ತೆರಿಗೆ ಹೇರಿರುವುದು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೇಗೆ ತೊಂದರೆ ಉಂಟು ಮಾಡಿದೆ ಎಂಬ ಬಗ್ಗೆ ಅನೇಕರು ಗಮನಸೆಳೆದಿದ್ದಾರೆ. ಮಂಗಳೂರಿಗೆ ಇನ್ನಷ್ಟು ವಿಮಾನಗಳು ಬರಬೇಕು, ದೇಶೀಯ ವಿಮಾನಗಳ ಹಾರಾಟವೂ ಹೆಚ್ಚಬೇಕು, ಆ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ ಎಂದು ಸಂಘಟಕರಲ್ಲೊಬ್ಬರಾದ ಶ್ರೀಕರ ತಿಳಿಸಿದ್ದಾರೆ. ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಟ್ವೀಟ್ ಅಭಿಯಾನ ನಡೆಯಿತು.


ಆದರೆ ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಬಿಟ್ಟರೆ ಜನಪ್ರತಿನಿಧಿಗಳು ಇದರಲ್ಲಿ ಸಹಭಾಗಿತ್ವ ಕೊಟ್ಟಿಲ್ಲ . ರಾಜಕೀಯ ವಿಚಾರ, ಬೆರೆ ರಾಜ್ಯಗಳಲ್ಲಿ ನಡೆಯುವ ಗಲಾಟೆಗಳನ್ನು ಟ್ವಿಟ್ ಮಾಡುವ ಜನಪ್ರತಿನಿಧಿಗಳಿಗೆ ಜಿಲ್ಲೆಯ ಅಭಿವೃದ್ದಿ ಬಗ್ಗೆ ಜನರ ಅಭಿಯಾನಕ್ಕೆ ಸಾಥ್ ನೀಡಬೇಕೆಂಬ ಸಾಮಾನ್ಯ ಜ್ಞಾನ ಇಲ್ಲದೆ ಇರುವುದು ವಿಪರ್ಯಾಸವಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *