LATEST NEWS
ಉಡುಪಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆ ಜಲಾವೃತವಾದ ತಗ್ಗು ಪ್ರದೇಶ
ಉಡುಪಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆ ಜಲಾವೃತವಾದ ತಗ್ಗು ಪ್ರದೇಶ
ಉಡುಪಿ ಜೂನ್ 29: ಕಳೆದ ಕೆಲವು ದಿನದಿಂದ ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಗೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು ಇಂದು ಮುಂಜಾನೆಯಿಂದ ಮಳೆ ಮತ್ತೆ ಚುರುಕು ಗೊಂಡಿದೆ.
ಉಡುಪಿ ಜಿಲ್ಲೆಯಾದ್ಯಂತ ಸುರಿದ ಮಳೆಗೆ ತಾಲೂಕಿನ ಎಲ್ಲಾ ನದಿ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮಳೆಗೆ ತಗ್ಗು ಪ್ರದೇಶಗಳು ಜಲಾವೃತ್ತಗೊಂಡಿದ್ದು, ದೋಣಿ ಮೂಲಕ ಸಂಚಾರ ಮಾಡುವ ಸ್ಥಿತಿ ಎದುರಾಗಿದೆ.
ಕೆಲವು ಕಡೆ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ತೀರ್ಥಹಳ್ಳಿ ಆಗುಂಬೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ 7 ನೇ ತಿರುವಿನಲ್ಲಿ ಗುಡ್ಡ ಕುಸಿತಗೊಂಡಿದ್ದು ಲಾರಿ ಟಿಪ್ಪರ್ ಬಸ್ಸು ಸೇರಿದಂತೆ ಅಧಿಕ ಸಾಮರ್ಥ್ಯದ ವಾಹನಕ್ಕೆ ಸಂಚಾರ ನಿಷೇಧಿಸಲಾಗಿದೆ.
ತುರ್ತಾಗಿ ರಸ್ತೆ ರಿಪೇರಿ ಮಾಡುವಂತೆ ಹೆದ್ದಾರಿ ಇಲಾಖೆಗೆ ಜಿಲ್ಲಾಧಿಕಾರಿ ಪ್ರೀಯಾಂಕ ಮೇರಿ ಫ್ರಾನ್ಸಿಸ್ ಆದೇಶ ಹೊರಡಿಸಿದ್ದಾರೆ.ಇಂದು ಕೂಡ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ಕಡಲಿಗಿಳಿಯುವುದು ಕಷ್ಟಸಾಧ್ಯವಾಗಿದೆ.ಜಿಲ್ಲೆಯಾದ್ಯಂತ ಮೋಡಕವಿದಿದ್ದು ಮಳೆ ಮುಂದುವರಿಯುವ ಸೂಚನೆ ದಟ್ಟವಾಗಿದೆ.