KARNATAKA
VIDEO – ಲ್ಯಾಂಡಿಂಗ್ ಗೇರ್ ನಲ್ಲಿ ತಾಂತ್ರಿಕದೋಷ..ಎರಡೇ ಚಕ್ರದಲ್ಲಿ ಲ್ಯಾಂಡ್ ಆದ ವಿಮಾನ…!!

ಬೆಂಗಳೂರು ಜುಲೈ 12 : ಲ್ಯಾಂಡಿಂಗ್ ಗೇರ್ ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಪೈಲೆಟ್ ವಿಮಾನವನ್ನು ಹಿಂದಿನ ಎರಡು ಚಕ್ರಗಳ ಸಹಾಯದಲ್ಲಿ ಲ್ಯಾಂಡ್ ಮಾಡಿದ ಘಟನೆ ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
HAL ನಿಂದ ಟೇಕ್ ಆಫ್ ಆಗಿ BIALಗೆ ಹೊರಟಿದ್ದ VT-KBN ಹೆಸರಿನ 1A ಸೇನಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಮುಂಭಾಗದ ವ್ಹೀಲ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ತುರ್ತಾಗಿ HALನಲ್ಲೆ ಲ್ಯಾಂಡ್ ಮಾಡಲಾಗಿದೆ.

ಆಘಾತಕಾರಿ ವಿಚಾರವೆಂದರೆ ವಿಮಾನ ಲ್ಯಾಂಡಿಂಗ್ ವೇಳೆ ಮಗುಚಿ ಬೀಳುವ ಹಂತಕ್ಕೆ ಹೋಗಿತ್ತು. ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು ಸದ್ಯ ಯಾರಿಗೂ ಪ್ರಾಣಾಪಾಯವಾಗಿಲ್ಲ.
ತಾಂತ್ರಿಕ ದೋಷದಿಂದಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಸುರಕ್ಷಿತ ಭೂಸ್ಪರ್ಶಕ್ಕಾಗಿ ರನ್‌ವೇಯಲ್ಲಿ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಸೇನಾ ವಿಮಾನವನ್ನು ಕೇವಲ ಎರಡೇ ಚಕ್ರಗಳಲ್ಲಿ ಲ್ಯಾಂಡ್ ಮಾಡಲಾಯಿತು. ಸುರಕ್ಷಿತವಾಗಿ ವಿಮಾನ ಭೂಸ್ಪರ್ಶ ಮಾಡಿದ್ದನ್ನು ಕಂಡು ಹೆಚ್‌ಎಎಲ್ ಸಿಬ್ಬಂದಿ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.