KARNATAKA
ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ವಾಹನದ ಮುಂಭಾಗದ ಗ್ಲಾಸ್ ಅಂಟಿಸುವುದು ಕಡ್ಡಾಯ,ಇಲ್ಲದಿದ್ರೆ ಟೋಲ್ ಪ್ಲಾಜಾಗಳಲ್ಲಿ ಡಬಲ್ ಶುಲ್ಕ ವಸೂಲಿ..!
ನವದೆಹಲಿ : ಫಾಸ್ಟ್ ಟ್ಯಾಗ್ ಸ್ಟಿಕ್ಕರ್ ವಾಹನದ ಮುಂಭಾಗದ ಗ್ಲಾಸ್ ಅಂಟಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದ್ದು ಈ ನಿಯಮ ಮೀರಿದ್ರೆ ಟೋಲ್ ಪ್ಲಾಜಾಗಳಲ್ಲಿ ಡಬಲ್ ಶುಲ್ಕ ವಸೂಲಿ ಮಾಡಲು ಆದೇಶ ಹೊರಡಿಸಿದೆ. ಈ ಹೊಸ ಆದೇಶ ಇಂದಿನಿಂದ (ಜುಲೈ 19 ರಿಂದ) ಜಾರಿಗೆ ಬಂದಿದೆ.
ಫಾಸ್ಟ್ ಟ್ಯಾಗ್ ಸ್ಟಿಕರ್ ಗಳನ್ನು ವಾಹನಗಳ ಮೇಲ್ಮೈ ಮೇಲೆ ಎಲ್ಲಿ ಬೇಕಾದಲ್ಲಿ ಅಂಟಿಸುವುದರಿಂದ ಬೇಗನೇ ಸ್ಕ್ಯಾನ್ ಆಗದೇ ಪ್ಲಾಜಾಗಳಲ್ಲಿ ಇತರ ವಾಹನಗಳು ಕ್ಯೂ ನಿಂತು ವಿಳಂಬವಾಗುತ್ತವೆ. ಇಂಥ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸಾರಿಗೆ ಇಲಾಖೆಯು ಫಾಸ್ಟ್ ಟ್ಯಾಗ್ ಸ್ಟಿಕರ್ ಗಳನ್ನು ವಾಹನಗಳ ಮುಂದಿನ ವಿಂಡ್ ಶೀಲ್ಡ್ (ಫ್ಲಂಟ್ ಗ್ಲಾಸ್) ಮೇಲೆ ಅಂಟಿಸಬೇಕು, ಇಲ್ಲವಾದರೆ ಟೋಲ್ ನಲ್ಲಿ ದುಪ್ಪಟ್ಟು ಶುಲ್ಕ ತೆರಬೇಕಾಗುತ್ತದೆ ಎಂದು ಎಚ್ಚರಿಸಿದೆ. ಜು 19ರಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ. ಈ ಕುರಿತಂತೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಪ್ರಕಟಣೆ ನೀಡಿದೆ.
ಸಚಿವಾಲಯವು ವಿವರಿಸಿರುವಂತೆ, ಮುಂದಿನ ಗಾಜಿನ ಮೇಲೆ ಬೇಕೆಂತಲೇ ಫಾಸ್ಟಾಗ್ ಅಂಟಿಸದಿರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಕ್ಕೆ ಕಾರಣವಾಗುತ್ತದೆ. ಅದರಿಂದ ಸಹಜವಾಗಿ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತೊಂದರೆ ಉಂಟುಮಾಡುತ್ತದೆ. ಅಂಥ ತಪ್ಪುಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.