KARNATAKA
ಮೇಕೆದಾಟು ಬಳಿ ಈಜಲು ಹೋಗಿದ್ದ ಬೆಂಗಳೂರಿನ ಐವರು ಪ್ರವಾಸಿಗರು ನೀರಲ್ಲಿ ಮುಳುಗಿ ಮೃತ್ಯು..!

ರಾಮನಗರ: ಮೇಕೆದಾಟು ಸಂಗಮಕ್ಕೆ ಈಜಲು ತೆರಳಿದ್ದ ಬೆಂಗಳೂರಿನ ಖಾಸಗಿ ಕಾಲೇಜಿನ ಐವರು ವಿದ್ಯಾರ್ಥಿಗಳು ನೀರುಪಾಲಾಗಿರುವಂತಹ ದಾರುಣ ಘಟನೆ ನಡೆದಿದೆ.
ರಾನನಗರದ ಕನಕಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ರಾಜಾಜಿನಗರ 2ನೇ ಹಂತದ ಕೆಎಲ್ಇ ಕಾಲೇಜಿನ ವರ್ಷ (20), ಬಿಹಾರ ಮೂಲದ ಮಲ್ಲೇಶ್ವರ ಸರ್ಕಾರಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಅಭಿಷೇಕ್ (20), ಮಂಡ್ಯ ಮೂಲದ ಚಿಕ್ಕಬಾಣಾವರ ಆರ್.ಆರ್ ಕಾಲೇಜಿನ 2ನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಅರ್ಪಿತಾ ಎನ್.ಎಲ್, ಚಿತ್ರದುರ್ಗ ಮೂಲದ ವಿಜಯನಗರ ಸರ್ಕಾರಿ ಪದವಿ ಕಾಲೇಜಿನ ಬಿಸಿಎ 2ನೇ ವರ್ಷದ ವಿದ್ಯಾರ್ಥಿ ತೇಜಸ್ (21), ಆರ್.ಆರ್ ನಗರದ ಕೆಎಲ್ಇ ಕಾಲೇಜಿನ ನೇಹಾ (19) ಮೃತರು. ಕಾವೇರಿ ನದಿಯಿಂದ ಅಗ್ನಿಶಾಮಕ ದಳ ಶವಗಳನ್ನ ಹೊರತೆಗೆದಿದ್ದಾರೆ. ಸಾತನೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
