LATEST NEWS
ಅಮೆರಿಕದಲ್ಲಿ ಕಾರುಗಳ ಮಧ್ಯೆ ಢಿಕ್ಕಿ , ಭಾರತೀಯ ಮೂಲದ ಮೂವರು ಸೇರಿ ಐವರು ಮೃತ್ಯು..!
ವಾಷಿಂಗ್ಟನ್ : ಅಮೆರಿಕದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಭಾರತೀಯ ಕುಟುಂಬದ ಮೂವರು ಸೇರಿ ಐವರು ದಾರುಣ ಅಂತ್ಯ ಕಂಡಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಭಾರತೀಯರು ಸಾವನ್ನಪ್ಪಿದ್ದಾರೆ. ಅಮೆರಿಕದ ಟೆಕ್ಸಾಸ್ ನಲ್ಲಿ ಈ ಅಪಘಾತ ಸಂಭವಿಸಿದ್ದು ಮೃತರನ್ನು ಮಣಿ ಅರವಿಂದ್ (45), ಅವರ ಪತ್ನಿ ಪ್ರದೀಪ ಮತ್ತು ಮಗಳು ಆಂಡ್ರಿಯಾ (17) ಎಂದು ಗುರುತಿಸಲಾಗಿದೆ. ಅರವಿಂದ್ ಅವರ ಕಾರಿಗೆ ಡಿಕ್ಕಿ ಹೊಡೆದ ಮತ್ತೊಂದು ಕಾರಿನಲ್ಲಿದ್ದ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ. ಅರವಿಂದ್ ಮತ್ತು ಅವರ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ಗಂಟೆಗೆ 112 ಕಿ.ಮೀ ವೇಗದಲ್ಲಿತ್ತು. ಮಗಳನ್ನು ಕಾಲೇಜಿಗೆ ಕರೆದೊಯ್ಯುವ ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯ ಸಮಯದಲ್ಲಿ ದಂಪತಿಯ ಮಗ ಅಧೀರನ್ ಅವರೊಂದಿಗೆ ಇರಲಿಲ್ಲ. ಇದೀಗ ಕುಟುಂಬ ಎಲ್ಲ ಸದಸ್ಯರನ್ನು ಕಳಕೊಂಡ ಅಧೀರಿಯನ್ ಮಾತ್ರ ಅನಾಥರಾಗಿದ್ದಾರೆ. ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಆಂಡ್ರಿಯಾ ಕಂಪ್ಯೂಟರ್ ವಿಜ್ಞಾನವನ್ನು ಅಧ್ಯಯನ ಮಾಡಲು ಡಲ್ಲಾಸ್ ವಿಶ್ವವಿದ್ಯಾಲಯಕ್ಕೆ ಸೇರಲು ತಯಾರಿ ನಡೆಸುತ್ತಿದ್ದರು. ಏತನ್ಮಧ್ಯೆ, ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರಿನ ಟೈರ್ ಸ್ಪೋಟಗೊಂಡಿದ್ದು ನಂತರ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
You must be logged in to post a comment Login