LATEST NEWS
ಉಳ್ಳಾಲ : Part Time job ನ್ನೇ ಉದ್ಯೋಗ ಮಾಡಿಕೊಂಡ ವಂಚಕರು, 5 ಜನ ಕೊಣಾಜೆ ಪೊಲೀಸ್ ಬಲೆಗೆ..!!
ಉಳ್ಳಾಲ: Part Time job ನ್ನೇ ಉದ್ಯೋಗ ಮಾಡಿಕೊಂಡ ವಂಚಕರು ಒರ್ವನಿಗೆ ಲಕ್ಷಾಂತರ ರೂಪಾಯಿಗಳನ್ನು ವಂಚನೆ ಮಾಡಿದ ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದು ಈ ಸಂಬಂಧ ಐವರನ್ನು ಮಂಗಳೂರಿನ ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರು ಮೂಲದ ಈ ವಂಚಕರು ವ್ಯಕ್ತಿಯೋರ್ವರಿಗೆ ಪಾರ್ಟ್‌ಟೈಮ್ ಜಾಬ್ ಆಫರ್ ನೀಡಿ ಬರೋಬ್ಬರಿ ಒಟ್ಟು 28,18,065 ರೂ ಇವರು ಲೂಟಿ ಮಾಡಿದ್ದಾರೆ.
ಸೈಯ್ಯದ್ ಮಹಮ್ಮದ್, ಶುಯೇಬ್, ಮೊಹಮ್ಮದ್ ಶಾರೀಕ್ ಅಹ್ಮದ್, ಮೊಹ್ಸೀನ್ ಅಹ್ಮದ್ ಖಾನ್ ಹಾಗೂ ಮೊಹಮ್ಮದ್ ಅಜಂ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು 2024 ಜು.21ರಂದು ಪಾರ್ಟ್‌ಟೈಮ್ ಜಾಬ್ ಬಗ್ಗೆ ಪೋನ್ ನಂಬರ್‌ಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದರು. ವಾಟ್ಸಾಪ್ ಮೆಸೇಜ್‌ನಲ್ಲಿ ಟೆಲಿಗ್ರಾಮ್ ಆ್ಯಪ್‌ನ ಲಿಂಕ್ ಕಳುಹಿಸಿ ಓಪನ್ ಮಾಡುವಂತೆ ತಿಳಿಸಿದ್ದರು. ಅದರಂತೆ ದೂರುದಾರರು ಟೆಲಿಗ್ರಾಮ್ ಆ್ಯಪ್‌ನ್ನು ಓಪನ್ ಮಾಡಿದಾಗ ಟೆಲಿಗ್ರಾಮ್‌ನಲ್ಲಿ ಪಾರ್ಟ್‌ಟೈಮ್ ಜಾಬ್ ಏನೆಂದು ಕೇಳಿದಾಗ ಅವರಿಗೆ ಒಂದು ವಿಡಿಯೋ ಕಳುಹಿಸಿ ಅದನ್ನು ನೋಡಿ ಸ್ಕ್ರೀನ್ ಶಾಟ್ ಕಳುಹಿಸಲು ತಿಳಿಸಿದ್ದರು. ಅದರಂತೆ ಪಿರ್ಯಾದಿದಾರರು ಅವರಿಗೆಸ್ಕ್ರೀನ್ ಶಾಟ್ ಕಳುಹಿಸಿದ ತಕ್ಷಣ ಅವರ ಬ್ಯಾಂಕ್ ನ ಖಾತೆಗೆ 130 ರೂ. ಹಾಕಿದ್ದರು.
ನಂತರ ದೂರುದಾರರು ಹಾಕಿದ ವಿಡಿಯೋ ತಪ್ಪಾಗಿದೆ ಎಂದು ಹೇಳಿ ಅದನ್ನು ಸರಿ ಮಾಡಲು ಟೆಲಿಗ್ರಾಮ್ ಲಿಂಕ್ ಕಳುಹಿಸಿದ್ದಾರೆ. ಆ ಲಿಂಕ್‌ನ್ನು ದೂರುದಾರರು ಓಪನ್ ಮಾಡಿದಾಗ ಆರೋಪಿಗಳು 1,000 ರೂ.ಮೊತ್ತವನ್ನು ಹಾಕಲು ಹೇಳಿದ್ದಾರೆ. ಅದರಂತೆ ದೂರುದಾರರು ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಆರೋಪಿಗಳು ನೀಡಿದ ಬೇರೆ ಬೇರೆ ಖಾತೆಗೆ ದೂರುದಾರರನ್ನು ಹೆಚ್ಚು ಹಣವನ್ನು ಕೋಡುವುದಾಗಿ ನಂಬಿಸಿ ಮೋಸ ಮಾಡಿ ಒಟ್ಟು 28,18,065 ರೂ. ಮೊತ್ತವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಐಟಿ ಕಾಯಿದೆಯಂತೆ ದೂರು ದಾಖಲಾಗಿತ್ತು.
ತನಿಖೆ ನಡೆಸಿದ ಪಿಐ ರಾಜೇಂದ್ರ ಅವರು ಹಣ ವರ್ಗಾವಣೆಯಾಗಿರುವ ಬ್ಯಾಂಕ್ ಖಾತೆ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ಮೈಸೂರು ಉದಯಗಿರಿ ಮೂಲದ ನಾಲ್ವರು ಆರೋಪಿಗಳು ಮತ್ತು ಬೆಂಗಳೂರು ನೀಲಸಂದ್ರ ಮೂಲದ ಓರ್ವ ಆರೋಪಿಯನ್ನು ಬಂಧಿಸಿದ್ದರು.
ಈ ಪ್ರಕರಣದ ಬಗ್ಗೆ ವಿಚಾರಿಸಿದಾಗ ಆರೋಪಿ ಶುಯೇಬ್ ಎಂಬಾತನಿಗೆ ದಸ್ತಗಿರ್ ಎಂಬಾತನ ಪರಿಚಯವಾಗಿದ್ದು, ಆತನು ಆರೋಪಿ ಶುಯೇಬ್‌ನಲ್ಲಿ ತನಗೆ ಬ್ಯಾಂಕ್ ಆಕೌಂಟ್ (ಪಾಸ್ ಬುಕ್, ಚೆಕ್ ಬುಕ್, ಎಟಿಎಮ್ ಕಾರ್ಡ್ ಹಾಗೂ ಆಕೌಂಟ್‌ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್) ಗಳನ್ನು ಮಾಡಿಸಿಕೊಡು, ನಿನಗೆ ಬ್ಯಾಂಕ್ ಲೋನ್ ಮಾಡಿಕೊಡುತ್ತೇನೆ ಅಲ್ಲದೇ ಒಂದು ಬ್ಯಾಂಕ್ ಆಕೌಂಟ್ ಗೆ 10,000 ರು. ನೀಡುವುದಾಗಿ ತಿಳಿಸಿದ್ದನು. ಅದರಂತೆ ಶುಯೇಬ್ ಮೈಸೂರು ರಾಜೇಂದ್ರ ನಗರ ಶಾಖೆಯ ಕರ್ಣಾಟಕ ಬ್ಯಾಂಕ್ ಮತ್ತು ಎನ್. ಆರ್. ಮೊಹಲ್ಲಾ ಶಾಖೆಯ ಕೆನರಾ ಬ್ಯಾಂಕ್ ಆಕೌಂಟ್‌ಗಳನ್ನು (ಪಾಸ್ ಬುಕ್, ಚೆಕ್ ಬುಕ್, ಎಟಿಎಮ್ ಕಾರ್ಡ್ ಹಾಗೂ ಆಕೌಂಟ್‌ಗೆ ಲಿಂಕ್ ಆಗಿರುವ ಸಿಮ್ ಕಾರ್ಡ್) ದಸ್ತಗೀರ್‌ಗೆ ನೀಡಿದ್ದು, 20,000 ರೂ. ಕೊಟ್ಟಿದ್ದನು. ಈ ಮಧ್ಯೆ ಶುಯೇಬ್‌ಗೆ ಏರ್‌ಟೆಲ್ ಕಂಪನಿಯಲ್ಲಿ ಪ್ರೋಡೆಕ್ಟ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ ಸೈಯ್ಯದ್ ಮೆಹಮೂದ್ ಎಂಬಾತನ ಪರಿಚಯವಾಗಿದೆ. ಸೈಯ್ಯದ್ ಮೊಹಮ್ಮದ್‌ನಿಂದ ಸಿಮ್ ಖರೀದಿಸಿದ್ದಲ್ಲದೆ, ಶುಯೇಬ್‌ನ ಸೂಚನೆಯಂತೆ ಆತನು ಹೇಳಿದ ವ್ಯಕ್ತಿಗಳಿಗೆ ಸೈಯ್ಯದ್ ಮೊಹಮ್ಮದ್ ಸಿಮ್ ಕೊಟ್ಟಿದ್ದನು. ಮತ್ತು ಬೆಂಗಳೂರು ಮೂಲದ ಆರೋಪಿ ಮೊಹಮ್ಮದ್ ಅಜಂ 3,000 ರೂ. ಗೆ ಬೆಂಗಳೂರಿನ ಎಂಜಿ ರೋಡು ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಖಾತೆ ಮಾಡಿ ಇನ್ನೂರ್ವ ಆರೋಪಿಗೆ ಮಾರಾಟ ಮಾಡಿದ್ದನು. ಈ ರೀತಿ ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಬ್ಯಾಂಕ್ ಖಾತೆಯನ್ನು ಮಾರಾಟ ಮಾಡಿರುವುದು ತನಿಖೆಯಿಂದ ತಿಳಿದುಬಂದಿತ್ತು. ಇದೇ ರೀತಿ ಮೈಸೂರಿನ ನೆಹರು ನಗರ, ಶಾಂತಿ ನಗರ, ರಾಜೀವ ನಗರ ಹಾಗೂ ಬೆಂಗಳೂರಿನ ನೀಲಸಂದ್ರ ಹಾಗೂ ಹಲವಡೆ ಸೈಬರ್ ಮೋಸದ ಅಪರಾಧಕ್ಕೆ ಹೆಚ್ಚಿನ ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಹಣಕ್ಕೆ ಮಾರಾಟ ಮಾಡಿರುವುದು ಆರೋಪಿಗಳ
ವಿಚಾರಣೆಯಲ್ಲಿ ತಿಳಿದು ಬಂದಿದೆ. ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ನಿರ್ದೇಶನದಲ್ಲಿ, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್ ಮತ್ತು ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಎಸಿಪಿ ಧನ್ಯಾ ನಾಯಕ್, ಇನ್‌ಸ್ಪೆಕ್ಟರ್ ರಾಜೇಂದ್ರ, ಎಸ್‌ಐ ಪುನೀತ್ ಗಾಂವ್ಕರ್, ಅಶೋಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.