LATEST NEWS
ಗಾಂಜಾ ಸೇವನೆ ಹಿನ್ನೆಲೆ – 5 ಮಂದಿಯ ಬಂಧನ
ಗಾಂಜಾ ಸೇವನೆ ಹಿನ್ನೆಲೆ – 5 ಮಂದಿಯ ಬಂಧನ
ಮಂಗಳೂರು ಫೆಬ್ರವರಿ 2 : ಗಾಂಜಾ ಸೇವಿಸುತ್ತಿದ್ದ 5 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಉಪ-ವಿಭಾಗದ ಎ.ಸಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮಂಗಳೂರಿನ ಮಂಜನಾಡಿಯ ಉರುಮನೆ ಎಂಬಲ್ಲಿ 5 ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ಮುನೀರ್, ಮಹಮ್ಮದ್ ಶುಕೂರ್, ಮಹಮ್ಮದ್ ಅಫ್ವಾನ್, ಸವಾದ್, ಸದಾಕತುಲ್ಲಾ ಎಂದು ಗುರುತಿಸಲಾಗಿದೆ. ವೈದ್ಯಕೀಯ ಪರೀಕ್ಷೆ ವೇಳೆ ಗಾಂಜಾ ಸೇವನೆ ದೃಢಪಟ್ಟಿದೆ. ಕೊಣಾಜೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.