LATEST NEWS
ಮೀನುಗಾರನನ್ನು ಕ್ರೇನ್ ಗೆ ಉಲ್ಟಾ ನೇತು ಹಾಕಿ ಹಲ್ಲೆ – 6 ಮಂದಿ ಆರೋಪಿಗಳು ಅರೆಸ್ಟ್

ಮಂಗಳೂರು ಡಿಸೆಂಬರ್ 23: ಮೊಬೈಲ್ ಕಳ್ಳತನ ಆರೋಪಿಸಿ ವ್ಯಕ್ತಿಯೊಬ್ಬರನ್ನು ಮೀನುಗಾರಿಕಾ ಬೋಟ್ ನ ಕ್ರೇನ್ ಗೆ ತಲೆಕೆಳಗಾಗಿ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಂಡೂರು ಪೋಲಯ್ಯ (23), ಅವುಲ ರಾಜ್ ಕುಮಾರ್ (26), ಕಾಟಂಗೇರಿ ಮನೋಹರ್ (21), ವೂಟುಕೋರಿ ಜಾಲಯ್ಯ (30), ಕರಪಿಂಗಾರ ರವಿ (27) ಹಾಗೂ ಪ್ರಲಯಕಾವೇರಿ ಗೋವಿಂದಯ್ಯ (47) ಎಂದು ಗುರುತಿಸಲಾಗಿದ್ದು, ಎಲ್ಲಾ ಆರೋಪಿಗಳು ಆಂಧ್ರಪ್ರದೇಶದವರು ಎನ್ನಲಾಗಿದೆ.

ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆಂಧ್ರಪ್ರದೇಶದ ಕಾಟಮ್ವಾರಿ ಪಾಲೆಮ್ ನಿವಾಸಿ ವೈಲ ಶೀನು (32) ಎಂಬಾತನನ್ನು ಮೊಬೈಲ್ ಕಳ್ಳತನದ ಆರೋಪ ಮೇಲೆ ಬಂಧಿತ ಆರೋಪಿಗಳು ಆತನನ್ನು ಅಪಹರಣ ಮಾಡಿ ಬೋಟ್ ಒಂದರ ಕ್ರೇನ್ ಗೆ ತಲೆಕೆಳಗಾಗಿ ಕಟ್ಟಿ ಹಲ್ಲೆ ನಡೆಸಿದ್ದರು. ಈ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.