Connect with us

    LATEST NEWS

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕ್ರಿಸ್ಮಸ್ ಹೊಸವರ್ಷಾಚರಣೆ ಸಂಭ್ರಮಕ್ಕೆ ಮಾರ್ಗಸೂಚಿ

    ಮಂಗಳೂರು ಡಿಸೆಂಬರ್ 23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌- 19 ರೂಪಾಂತರಿ ಒಮಿಕ್ರಾನ್‌ ವೈರಾಣು ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಿಸ್ಮಸ್‌ ಮತ್ತು ಹೊಸ ವರ್ಷವನ್ನು ಸರಳವಾಗಿ ಆಚರಿಸಲು ಮಾರ್ಗಸೂಚಿ ಹೊರಡಿಸಿ, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.


    ಚರ್ಚ್ ಆವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆಯನ್ನು ಕೋವಿಡ್‌ ಸಮುಚಿತವರ್ತನೆ ಅನುಸರಿಸಿ ಆಚರಿಸಬೇಕು. ಕ್ರಿಸ್ಮಸ್‌ ಆಚರಣೆ ಅಥವಾ ಪ್ರಾರ್ಥನೆ ನಡೆಸಲು ಯಾವುದೇ ಸಾರ್ವಜನಿಕ ಸ್ಥಳ, ರಸ್ತೆ ಅಥವಾ ಉದ್ಯಾನವನ ಬಳಸುವಂತಿಲ್ಲ ಎಂದು ತಿಳಿಸಿದ್ದಾರೆ.

    ಕ್ಲಬ್‌, ಪಬ್‌, ರೆಸ್ಟೋರೆಂಟ್‌, ಹೋಟೆಲ್‌, ಉದ್ಯಾನವನ ಅಥವಾ ಖಾಸಗಿ ಸ್ಥಳಗಳಲ್ಲಿ ಡಿಜೆ, ಆರ್ಕೆಸ್ಟ್ರಾ, ಸಮೂಹ ನೃತ್ಯ ಮುಂತಾದ ಯಾವುದೇ ವಿಶೇಷ ಕಾರ್ಯಕ್ರಮ ನಡೆಸಲು ಅವಕಾಶವಿರುವುದಿಲ್ಲ. ಇಲ್ಲಿಯ ಸಿಬ್ಬಂದಿ ಆರ್‌ಟಿ-ಪಿಸಿಆರ್‌ ನೆಗೆಟಿವ್‌, 2 ಡೋಸ್‌ ಕೋವಿಡ್‌ ಲಸಿಕೆ ಕಡ್ಡಾಯವಾಗಿ ಪಡೆಯುವ ಮೂಲಕ ಕಾರ್ಯನಿರ್ವಹಿಸಬಹುದು. ಹೊಸ ವರ್ಷ ಆಚರಿಸಲು ಸಾರ್ವಜನಿಕ ಸ್ಥಳ ಸೇರಿದಂತೆ ರಸ್ತೆ, ಉದ್ಯಾನವನಗಳು, ಆಟದ ಮೈದಾನ ಇತ್ಯಾದಿಗಳನ್ನು ಬಳಸಬಾರದು.

    ಅಪಾರ್ಟ್‌ಮೆಂಟ್‌ ಅಸೋಸಿಯೇಶನ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಅಂತರ ಹಾಗೂ ಕೋವಿಡ್‌ ಸಮುಚಿತ ವರ್ತನೆಯೊಂದಿಗೆ ತಮ್ಮ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿಸಲಾಗಿದೆ. ಆದರೆ, ಗುಂಪು ನೃತ್ಯಕ್ಕಾಗಿ ಡಿಜೆ/ ಡ್ಯಾನ್ಸ್‌ ಪ್ಲೋರ್‌ನಂತಹ ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply