LATEST NEWS
ಮೀನು ಡಿಕ್ಕಿ ಹೊಡೆದ ರಭಸಕ್ಕೆ ಬೋಟ್ಗೆ ಹಾನಿ
ಮಂಗಳೂರು ಫೆಬ್ರವರಿ 13 : ಆಳ ಸಮುದ್ರ ಮೀನುಗಾರಿಕೆ ತೆರಳಿದ್ದ ಸಂದರ್ಭ ಮೀನೊಂದು ಬೋಟ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೋಟ್ ಹಾನಿಗೀಡಾಗಿರುವ ಘಟನೆ ಆಳಸಮುದ್ರ ಮೀನುಗಾರಿಕೆ ವೇಳೆ ನಡೆದಿದೆ.
ದೊಡ್ಡ ಗಾತ್ರದ, ಚೂಪು ಬಾಯಿ ಹೊಂದಿರುವ ತುಳುವಿನಲ್ಲಿ ಮಡಲ್ ಮೀನ್ ಎಂದು ಕರೆಯಲ್ಪಡುವ ಮೀನು ಬೋಟಿಗೆ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಚೂಪಾಗಿ ಇರುವ ಬಾಯಿ ಮುರಿದು ಮೀನಿನಲ್ಲಿ ರಕ್ತಸ್ರಾವ ಉಂಟಾಗಿದೆ. ಆದರೆ ಮೀನು ಗುದ್ದಿದ ಪರಿಣಾಮಕ್ಕೆ ಮೀನುಗಾರಿಕಾ ದೋಣಿಯೂ ಹಾನಿಗೀಡಾಗಿದೆ. ಇಂದು ನಸುಕಿನ 3.32 ರ ಹೊತ್ತಿಗೆ ಮಾಡಲಾಗಿದೆ ಎನ್ನಲಾದ ವಿಡಿಯೋ ಇದೀಗ ವೈರಲ್ ಆಗಿದೆ.
You must be logged in to post a comment Login