LATEST NEWS
ರಿಯಾದ್ : ರಣಭೀಕರ ಮರುಭೂಮಿಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರೀ ಹಿಮಪಾತ, ಪ್ರವಾಸಿಗರನ್ನು ಎಚ್ಚರಿಸಿದ ಸೌದಿ ಸರ್ಕಾರ..!!
ರಿಯಾದ್ : ಏಷ್ಯಾ ಖಂಡದ ಡೆಡ್ಲೀಯೆಸ್ಟ್ ಮರುಭೂಮಿಗಳಲ್ಲಿ ಒಂದಾದ ಸೌದಿ ಅರೇಬಿಯಾ ದ ಮರುಭೂಮಿಯಲ್ಲಿ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ.
ಇಲ್ಲಿನ ಮರಭೂಮಿ ಪ್ರದೇಶ ಹಾಗೂ ರಸ್ತೆಗಳಲ್ಲಿ ಹಿಮ ಬೀಳುತ್ತಿರುವ ಸುಂದರ ದೃಶ್ಯಾವಳಿಯ ಫೋಟೊ, ವಿಡಿಯೊಗಳು ಈಗ ವೈರಲ್ ಆಗಿವೆ. ಸುಡುತ್ತಿರುವ ಸೌದಿ ಅರೇಬಿಯಾದ ಮರುಭೂಮಿಯು ಇತಿಹಾಸದಲ್ಲಿ ಮೊದಲ ಬಾರಿಗೆ ಈ ಹಿಮಪಾತವನ್ನು ಕಂಡಿದೆ. ಆಘಾತಕಾರಿ ಸುದ್ದಿ ಏನೆಂದರೆ, ಸೌದಿ ಅರೇಬಿಯಾದ ಕೆಲವು ಭಾಗಗಳು ಮೊದಲ ಬಾರಿಗೆ ಭಾರೀ ಮಳೆ ಮತ್ತು ಹಿಮಪಾತವನ್ನು ಕಾಣುತ್ತಿವೆ.
ಅಲ್-ಜಾವ್ಫ್ ಪ್ರದೇಶವು ಭಾರೀ ಹಿಮಪಾತವನ್ನು ಅನುಭವಿಸುತ್ತಿದ್ದು ಸ್ಥಳೀಯ ನಿವಾಸಿಗಳಿಗೆ ಆಘಾತವನ್ನು ನೀಡಿದೆ. ಕಾರಣ ಅಲ್-ಜಾವ್ಫ್ ವರ್ಷವಿಡೀ ಶುಷ್ಕ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗುವ ನಿರೀಕ್ಷೆಯಿದೆ, ಇದು ರಸ್ತೆಗಳಲ್ಲಿ ಗೋಚರತೆಯನ್ನು ಕಡಿಮೆ ಮಾಡುತ್ತದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಜೊತೆಗೆ ಚಂಡಮಾರುತಗಳು ಸಹ ಬಲವಾದ ಗಾಳಿಯೊಂದಿಗೆ ಬೀಸುವ ಸಾಧ್ಯತೆಯಿದೆ ಎಂದು ಈ ಪ್ರದೇಶಗಳಿಗೆ ತೆರಳುವ ಪ್ರವಾಸಿಗರು, ಜನರನ್ನು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.