Connect with us

DAKSHINA KANNADA

ಕಾಸರಗೋಡು : ಎಡನೀರು ಮಠದ ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಕಾರು ದಾಳಿ ಪ್ರಕರಣ,  ಮಠಕ್ಕೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

ಕಾಸರಗೋಡು :  ಎಡನೀರು ಮಠದ (Edneer Mutt )ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಕಾರು ದಾಳಿ ಪ್ರಕರಣ ಸಂಬಂಧ  ಎಡ ನೀರು ಮಠಕ್ಕೆ ಮಾಜಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಮಾತುಕತೆ ನಡೆಸಿ ಧೈರ್ಯ ತುಂಬಿದ್ದಾರೆ.

ದ.ಕ ಜಿಲ್ಲೆಯ ಗಡಿಭಾಗವಾದ ಕೇರಳದ ಕಾಸರಗೋಡಿನಲ್ಲಿರುವ ಎಡನೀರು ಮಠಕ್ಕೆ  ಭೇಟಿ ನೀಡಿದ ಕಟೀಲ್  ಎಡನೀರು ಶ್ರೀ ಸಚ್ಛಿದಾನಂದ ಭಾರತೀ ಸ್ವಾಮೀಜಿ ಜೊತೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.ಭೇಟಿ ಬಳಿಕ ಮಾತನಾಡಿಸ  ನಳಿನ್ ಕುಮಾರ್ ಕಟೀಲ್ ಕೇರಳದ ಕಮ್ಯುನಿಸ್ಟ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಎಡನೀರು ಮಠಕ್ಕೆ 400 ವರ್ಷಗಳ ಇತಿಹಾಸವಿದೆ.  ಶ್ರೀಗಳ ಕಾರು ತಡೆದು ಕಲ್ಲು ತೂರಾಟ ನಡೆಸಿದ ಘಟನೆ ಖಂಡನೀಯವಾಗಿದೆ.  ಕಾಸರಗೋಡಿನ ಬೋವಿಕಾನ–ಇರಿಯಣ್ಣಿ ಮಾರ್ಗ ಮಧ್ಯೆ  ಅನ್ಯಕೋಮಿನ ಯುವಕರ ತಂಡದಿಂದ ಕಾರು ತಡೆದು ಗಲಾಟೆ ಮಾಡಿದ ಆರೋಪವಿದೆ.

ಕೇರಳ ಸರ್ಕಾರ ಸ್ವಯಂ ಪ್ರೇರಿತ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕಿತ್ತು ಆದ್ರೆ  ಘಟನೆ ನಡೆದು ಎರಡು ದಿನವಾದ್ರೂ ಆರೋಪಿಗಳ ಬಂಧನ ಆಗಿಲ್ಲ.  ಮತಬ್ಯಾಂಕ್ ಹಿಂದೆ ಬಿದ್ದಿರೋ ಕೇರಳದ ಕಮ್ಯುನಿಸ್ಟ್ ಸಿಎಂ ಪಿನರಾಯಿ ವಿಜಯನ್ ಘಟನೆಯನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ ಜೊತೆಗೆ ಕೇರಳ ಗೃಹ ಸಚಿವರು ಕೂಡ ಪ್ರಕರಣದ ತನಿಖೆಗೆ ಆದೇಶ ಮಾಡಿಲ್ಲ ಇದೆಲ್ಲ ನೋಡುವಾಗ ಮುಂದಿನ ದಿನಗಳಲ್ಲಿ ಕೇರಳದಲ್ಲಿ ಮತ್ತಷ್ಟು ಘಟನೆ ನಡೀಬಹುದು ಎಂಬ ಭಯ ಶುರುವಾಗಿದೆ.

ಕಮ್ಯುನಿಸ್ಟ್ ಸರ್ಕಾರ ಮತಾಂಧ ಶಕ್ತಿಗಳ ಹಿಂದೆ ನಡೀತಾ ಇದೆ ಅನಿಸ್ತಾ ಇದೆ. ಕಾಸರಗೋಡು ಜಿಲ್ಲೆಯಲ್ಲಿ ದೇವಸ್ಥಾನಗಳಿಗೆ ಕಳ್ಳರು ನುಗ್ತಾ ಇದ್ದಾರೆ. ಈ ಭಾಗದ ದೇವಸ್ಥಾನಗಳ ಮೇಲೆ ನಿರಂತರ ದಾಳಿ‌ ನಡೀತಾ ಇದೆ. ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪಿನರಾಯಿ ಸರ್ಕಾರ ಎಡವಿದೆ. ಆದ್ರೆ ಸ್ವಾಮೀಜಿಗಳ ಜೊತೆ ಇಡೀ ಹಿಂದೂ ಸಮಾಜ ಇದೆ, ಕೈ ಕಟ್ಟಿ ಕುಳಿತುಕೊಳ್ಳೋ ಪ್ರಶ್ನೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *