LATEST NEWS
ಉಡುಪಿಯಲ್ಲಿ ಕೊರೊನಾಗೆ ಮೊದಲ ಬಲಿ

ಉಡುಪಿಯಲ್ಲಿ ಕೊರೊನಾಗೆ ಮೊದಲ ಬಲಿ
ಉಡುಪಿ ಮೇ.16: ಗ್ರೀನ್ ಝೋನ್ ಉಡುಪಿಯಲ್ಲಿ ಕೊರೋನಾ ಗೆ ಮೊದಲ ಬಲಿಯಾಗಿದೆ. ಮುಂಬೈ ನಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮೃತರಾದ ನಂತರ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ 54 ವರ್ಷದ ವ್ಯಕ್ತಿ ಮೇ 13 ರಂದು ಹೃದಯಾಘಾತದ ಹಿನ್ನಲೆ ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಪರಿಸ್ಥಿತಿ ಉಲ್ಬಣಗೊಂಡ ಹಿನ್ನಲೆ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಮೇ 13 ರ ರಾತ್ರಿಯೇ ಅವರಿಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೇ 14 ರ ಬೆಳಿಗ್ಗೆ ನಿಧನರಾಗಿದ್ದರು.

ಮೃತ ವ್ಯಕ್ತಿ ಮಹಾರಾಷ್ಟ್ರದಿಂದ ಬಂದಿದ್ದ ಕಾರಣ ಕೊರೋನಾ ಶಂಕೆ ಹಿನ್ನಲೆ ಗಂಟಲಿನ ದ್ರವ ಮಾದರಿಯನ್ನು ಕೊವಿಡ್ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ವರದಿ ಬಂದಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಕೊರೋನಾ ಪಾಸಿಟಿವ್ ಎಂದು ಧೃಡಪಟ್ಟಿದೆ. ಇದರೊಂದಿಗೆ ಕೊರೊನಾ ಗ್ರೀನ್ ಝೋನ್ ಉಡುಪಿಯಲ್ಲಿ ಕೊರೊನಾಗೆ ಮೊದಲ ಬಲಿಯಾದಂತಾಗಿದೆ.
ಮೃತ ವ್ಯಕ್ತಿಗೆ ಚಿಕಿತ್ಸೆ ನೀಡಿದ ಕೆಎಂಸಿಯ ಕೆಲ ವೈದ್ಯರು ಸಿಬ್ಬಂದಿ ಗಳು ಕ್ವಾರಂಟೈನ್ ಮಾಡಲಾಗಿದೆ ಎಂದು ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕರ ಮಾಹಿತಿ ನೀಡಿದ್ದಾರೆ.