KARNATAKA
ರಾಜ್ಯದಲ್ಲಿ ಈ ಬಾರಿ ದೀಪಾವಳಿಗೆ ಪಟಾಕಿ ನಿಷೇಧ: ಸಿಎಂ
ಬೆಂಗಳೂರು, ನವೆಂಬರ್ 06: ಈಗಾಗಲೇ ದೇಶದಲ್ಲಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ದೀಪಾವಳಿ ಸಂದರ್ಭ ಪಟಾಕಿ ಬ್ಯಾನ್ ಮಾಡಲಾಗಿದ್ದು, ರಾಜ್ಯದಲ್ಲೂ ಈ ಬಾರಿ ದೀಪಾವಳಿಗೆ ಪಟಾಕಿಯನ್ನು ನಿಷೇಧ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೀಪಾವಳಿಗೆ ಯಾವುದೇ ರೀತಿಯ ಪಟಾಕಿಗೆ ಅವಕಾಶ ಇರೋದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದಿಂದ ಪಟಾಕಿ ನಿಷೇಧಕ್ಕೆ ನಿರ್ಧಾರ ಮಾಡಲಾಗಿದೆ. ಅಲ್ಲದೆ ಪಟಾಕಿ ನಿಷೇಧಿಸಿ ಸರ್ಕಾರದಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸುವುದಾಗಿ ಬಿಎಸ್ ವೈ ತಿಳಿಸಿದರು.