DAKSHINA KANNADA
ಕುಕ್ಕೆ ಸಂಪುಟ ನರಸಿಂಹ ಮಠದ ವಿರುದ್ದ ಎಫ್ ಐ ಆರ್
ಕುಕ್ಕೆ ಸಂಪುಟ ನರಸಿಂಹ ಮಠದ ವಿರುದ್ದ ಎಫ್ ಐ ಆರ್
ಮಂಗಳೂರು ನವೆಂಬರ್ 23: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕುಕ್ಕೆ ಸಂಪುಟ ನರಸಿಂಹ ಮಠದ ನಡುವಿನ ಗುದ್ದಾಟ ಇನ್ನೂ ಮುಂದುವರೆದಿದ್ದು, ಕುಕ್ಕೆ ಸಂಪುಟ ನರಸಿಂಹ ಮಠದ ವಿರುದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಎಫ್ ಐ ಆರ್ ದಾಖಲಿಸಿದ್ದಾರೆ.
ಕುಕ್ಕೆ ಸಂಪುಟ ನರಸಿಂಹ ಮಠ ತನ್ನ ಮೂರು ವೆಬ್ ಸೈಟ್ ಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಚಿತ್ರ ಹಾಗೂ ದೇವಸ್ಥಾನದ ಪೋಟೋ ಬಳಸಿ ವಂಚನೆ ನಡೆಸುತ್ತಿದೆ. ಅಲ್ಲದೆ ದೇವಸ್ಥಾನದ ಸೇವೆಗಳನ್ನು ಖಾಸಗಿಯಾಗಿ ಮಾಡಿಸುವ ಬಗ್ಗೆ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದ್ದು, ಈ ಹಿನ್ನಲೆಯಲ್ಲಿ ದೇವಸ್ಥಾನದ ಆದಾಯಕ್ಕೆ ಕುಂಠಿವಾಗುತ್ತಿದ್ದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಮಂಗಳೂರಿನ ಸೈಬರ್ ಕ್ರೈಮ್ ಗೆ ದೂರು ನೀಡಿದ್ದರು.
ವೆಬ್ ಸೈಟಿನಲ್ಲಿ ಕುಕ್ಕೆ ದೇವರು, ಗೋಪುರದ ಚಿತ್ರ ಬಳಸಿದ್ದನ್ನು ಆಕ್ಷೇಪಿಸಿ ದೂರು ನೀಡಿದ್ದರು. ಮಂಗಳೂರು ಬಂದರು ಠಾಣೆಯಲ್ಲಿ ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದ ಸೈಬರ್ ಕ್ರೈಂ ವಿಭಾಗ ಪ್ರಕರಣವನ್ನು ಸುಬ್ರಹ್ಮಣ್ಯ ಠಾಣೆಗೆ ವರ್ಗಾಯಿಸಿದ್ದಾರೆ.
ಈಗಾಗಲೇ ದೇವಸ್ಥಾನ ಹಾಗೂ ಮಠದ ನಡುವಿನ ಗುದ್ದಾಟ ಹಿಂದೂ ಸಂಘಟನೆಗಳ ನಡುವೆ ಹೊಡೆದಾಟದ ಹಂತಕ್ಕೆ ತಲುಪಿದೆ. ಈಗ ಮತ್ತೆ ಮಠದ ವಿರುದ್ದ ದೇವಸ್ಥಾನದ ಆಡಳಿತಾಧಿಕಾರಿ ದೂರು ನೀಡಿದ್ದು, ಈ ಗುದ್ದಾಟ ಯಾವ ಹಂತಕ್ಕೆ ತಲುಪಲಿದೆ ಎನ್ನುವುದನ್ನು ನೋಡಬೇಕಿದೆ.