Connect with us

LATEST NEWS

ತಮಿಳುನಾಡು ರಾಜಕೀಯಕ್ಕೆ ಮತ್ತೊಬ್ಬ ನಟ ಎಂಟ್ರಿ – ಹೊಸ ಪಕ್ಷ ಘೋಷಿಸಿದ ವಿಜಯ್

ಚೆನ್ನೈ ಫೆಬ್ರವರಿ 02: ತಮಿಳುನಾಡು ರಾಜಕೀಯಕ್ಕೆ ಮತ್ತೊಬ್ಬ ನಟನ ಎಂಟ್ರಿಯಾಗಿದೆ. ನಟ ವಿಜಯ್ ತಮ್ಮ ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಹಿ ಘೋಷಿಸಿದ್ದಾರೆ.


ತಮಿಳನಾಡು ರಾಜಕೀಯಕ್ಕೆ ನಟ ದಳವತಿ ವಿಜಯ್ ಎಂಟ್ರಿಕೊಟ್ಟಿದ್ದಾರೆ. ತಮ್ಮ ಹೊಸ ಪಕ್ಷಕ್ಕೆ ತಮಿಳಗ ವೆಟ್ರಿ ಕಳಗಂ’ (Tamizhaga Vetri Kazhagam) ಎಂದು ನಾಮಕರಣ ಮಾಡಿದ್ದು, 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
‘ತಮಿಳಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡು ವಿಜಯ ಪಕ್ಷ’ (Tamil Nadu Victory Party) ಎಂದರ್ಥ. ರಾಜಕೀಯವು ಮತ್ತೊಂದು ಮನರಂಜನಾ ತಾಣವಲ್ಲ, ಪವಿತ್ರ ಸಾಮಾಜಿಕ ಸೇವೆ ಎಂದಿದ್ದಾರೆ.

‘ತಮ್ಮ ಪಕ್ಷವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಜತೆಗೆ ಯಾವ ಪಕ್ಷವನ್ನೂ ಬೆಂಬಲಿಸುತ್ತಿಲ್ಲ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳ ಕೆಲಸವನ್ನು ಮುಗಿಸಿದ ಬಳಿಕ, ಸಂಪೂರ್ಣವಾಗಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಈ ಪಕ್ಷ ಸ್ಥಾಪನೆ ತಮಿಳುನಾಡಿನ ಜನತೆಗೆ ಸಲ್ಲಿಸುವ ಕೃತಜ್ಞತೆಯಾಗಿದೆ’ ಎಂದು ವಿಜಯ್‌ ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *