LATEST NEWS
ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕಕ್ಕೆ ಚಿತ್ರನಟಿ ವಿನಯಾಪ್ರಸಾದ್ ಮತ್ತು ಚಿಂತಕಿ ವೀಣಾ ಬನ್ನಂಜೆ ಭೇಟಿ

ಉಡುಪಿ, ಜನವರಿ 17: ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯ ಸ್ಮಾರಕ ಉಡುಪಿ ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಕ್ಕೆ ಪ್ರಸಿದ್ಧ ಚಿತ್ರನಟಿ ವಿನಯಾಪ್ರಸಾದ್ ಮತ್ತು ಚಿಂತಕಿ ವೀಣಾ ಬನ್ನಂಜೆಯವರು ಮಂಗಳವಾರ ಭೇಟಿ ನೀಡಿದರು.
ಬನ್ನಂಜೆ ಆಚಾರ್ಯರ ಪ್ರತಿಮೆಗೆ ಮಾಲಾರ್ಪಣೆಗೈದು, ಗ್ರಂಥಾಲಯ ವೀಕ್ಷಿಸಿ ತುಂಬು ಮೆಚ್ಚುಗೆ ವ್ಯಕ್ತಪಡಿಸಿದರು . ಜಿಲ್ಲಾ ಗ್ರಂಥಾಲಯ ಮುಖ್ಯಾಧಿಕಾರಿ ಜಯಶ್ರೀ ಈರ್ವರನ್ನೂ ಆದರದಿಂದ ಬರಮಾಡಿಕೊಂಡು ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಿದರು. ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು .
