DAKSHINA KANNADA
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಟಗರು ಪುಟ್ಟಿ ಮಾನ್ವಿತಾ

ಪುತ್ತೂರು ಡಿಸೆಂಬರ್ 24: ಟಗರು ಚಿತ್ರದ ನಟಿ ಪುಟ್ಟಿ ಮಾನ್ವಿತಾ ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು ಕನ್ನಡದ ಯುವರತ್ನ ಪುನೀತ್ ಅವರ ಆತ್ಮಕ್ಕೆ ಶಾಂತಿಯನ್ನು ದೇವರು ನೀಡಲಿ ಎಂದು ಬೇಡಿದ್ದು, ಪುನೀತ್ ಇಲ್ಲದೆ ಇಡಿ ಚಿತ್ರರಂಗ ಬಡಲಾಗಿದೆ ಎಂದರು. ಬಹಳಷ್ಟು ಜನರಿಗೆ ನಾನು ಕರಾವಳಿಯವಳು ಎಂದು ತಿಳಿದಿಲ್ಲ, ತುಳು ಚಿತ್ರದಲ್ಲಿಯೂ ನಟಿಸಲು ಸಿದ್ದನಿದ್ದೇನೆ ಆದರೆ ಒಳ್ಳೆಯ ಚಿತ್ರಕಥೆ ಬೇಕು . ತುಳು ಚಿತ್ರದ ಕುರಿತಾಗಿ ಯಾವುದೇ ಮಾತುಕತೆ ಇಲ್ಲಿವರೆಗೆ ನಡೆದಿಲ್ಲ ಎಂದರು.

ನಾನೇ ಪ್ರೊಡಕ್ಷನ್ ಹೌಸ್ ಒಂದನ್ನು ಹೈದರಬಾದ್‌ನಲ್ಲಿ ಆರಂಭಿಸಿದ್ದೇನೆ. ಈ ಮೂಲಕ ಒಳ್ಳೆಯ ಕನ್ನಡ ಚಿತ್ರಗಳ ನಿರ್ಮಿಸುವ ಗುರಿ ಇದೆ. ಇದಕ್ಕಾಗಿ ಭಗವಂತನ ಆಶೀರ್ವಾದಕ್ಕಾಗಿ ಇಲ್ಲಿಗೆ ಆಗಮಿಸಿದ್ದೇನೆ. ನನ್ನ ಅಭಿನಯದ ಮರಾಠಿ ಸಿನೆಮಾ ಸದ್ಯದಲ್ಲೇ ರಿಲೀಸ್ ಆಗುವ ಸಾಧ್ಯತೆಯಿದೆ. ಕೊವೀಡ್ ಕಾರಣದಿಂದ ಬಿಡುಗಡೆ ತಡವಾಗಿದೆ ಎಂದು ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿದರು.