Connect with us

LATEST NEWS

ಪ್ರಕಾಶ್ ರೈಗೆ ಮಂಗಳೂರಿನಲ್ಲಿ DYFI ಅದ್ದೂರಿ ಸ್ವಾಗತ

ಪ್ರಕಾಶ್ ರೈಗೆ ಮಂಗಳೂರಿನಲ್ಲಿ DYFI ಅದ್ದೂರಿ ಸ್ವಾಗತ

ಮಂಗಳೂರು,ಅಕ್ಟೋಬರ್ 10: ಖ್ಯಾತ ಬಹುಭಾಷಾ ಚಿತ್ರನಟ ಪ್ರಕಾಶ್ ರೈ ಇಂದು ಮಂಗಳೂರಿಗೆ ಆಗಮಿಸಿದ್ದರು. ಪ್ರಕಾಶ್ ರೈಗೆ ಮಂಗಳೂರಿನ ಕೂಳೂರಿನಲ್ಲಿ ಡಿವೈಎಫ್ಐ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ನೀಡಲಾಯಿತು.

ಉಡುಪಿ ಕುಂದಾಪುರದ ಕೋಟದಲ್ಲಿ ಶಿವರಾಮ ಕಾರಂತರ ಜನ್ಮ ದಿನದ ಪ್ರಯುಕ್ತ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಡಾ. ಶಿವರಾಮ ಕಾರಂತ ಪ್ರಶಸ್ತಿ ಸ್ವೀಕರಿಸಲು‌ ಪ್ರಕಾಶ್ ರೈ ತೆರಳಿದ್ದು ದಾರಿಮಧ್ಯೆ ಡಿವೈಎಫ್ಐ ಕಾರ್ಯಕರ್ತರು ಸ್ವಾಗತ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಮಾತನಾಡಿದ ಪ್ರಕಾಶ್ ರೈ ಪ್ರತಿಭಟನೆ ಮಾಡುವುದು ಅವರವರ ಹಕ್ಕು ,ಪ್ರತಿಭಟನೆಗೆ ಹೆದರುವುದಿಲ್ಲ ಕಾರಂತ ನನ್ನ ಅಜ್ಜ , ನನಗೆ ಆತ್ಮೀಯರಾಗಿದ್ದರು ,ಅವರ ಹೆಸರಲ್ಲಿ ಪ್ರಶಸ್ತಿ ಸ್ವೀಕರಿಸುವುದು ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಉಡುಪಿಯಲ್ಲಿ ಬಿಗು ಭದ್ರತೆ: 

ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು ಅಪರಾಹ್ನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟದಲ್ಲಿ 3.30 ಗೆ  ನಡೆಯಲಿದೆ. ಪ್ರಶಸ್ತಿ ಸ್ವೀಕರಿಸಲಿರುವ ಖ್ಯಾತ ಬಹುಭಾಷಾ ನಟ ಈಗಾಗಲೇ ಉಡುಪಿಗೆ ಆಗಮಿಸಿದ್ದಾರೆ. ಉಡುಪಿಗೆ ಆಗಮಿಸಿದ ಪ್ರಕಾಶ್ ರೈ ಮಿತ್ರರೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡರು. ಅವರನ್ನು ಬೆಂಬಲಿಸಿದ ಹಲವು ಸಂಘಟನೆಗಳ ಮುಖ್ಯಸ್ಥರು ಮತ್ತು ಬೆಂಬಲಿಗರ ಜೊತೆ ಚರ್ಚೆ ನಡೆಸಿ ರೈ ಅವರು ಆತ್ಮೀಯ ಚರ್ಚಾಕೂಟದಲ್ಲಿ ವಿಚಾರ ವಿನಿಮಯ ಮಾಡಿಕೊಂಡರು. 

ಪ್ರಕಾಶ್ ರೈ ಗೆ ಪ್ರಶಸ್ತಿ ನೀಡುವುದನ್ನು ವಿರೋಧಿಸಿವೆ. ಸಮಾರಂಭದಲ್ಲಿ ಪ್ರಕಾಶ್ ರೈ ಅವರಿಗೆ ಹಲವು ಸಂಘಟನೆಗಳಿಂದ ಕಪ್ಪುಬಾವುಟ ಪ್ರದರ್ಶನ ಸಾಧ್ಯತೆ ಇರು ಹಿನ್ನೆಲೆಯಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ನಲ್ಲಿ  ಬಿಗಿ ಪೋಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪೋಲಿಸರು ಆಯಾಕಟ್ಟಿನ ಜಾಗಗಳಲ್ಲಿ ಪಹರೆ ನಡೆಸುತ್ತಿದ್ದಾರೆ. ಅಧಿಕಾರಿಗಳ ಜೊತೆ ಎಸ್ ಪಿ ಡಾ. ಸಂಜೀವ ಪಾಟೀಲ್ ಸಮಾಲೋಚನೆ ನಡೆಸಿದರು.ಗ್ರಂಥಾಲಯ, ಸಭಾಂಗಣ ಕೊಠಡಿಗಳ ಪರಿಶೀಲನೆ ನಡೆಸಿದರು. 250 ಮಂದಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಕಾನೂನು ಮೀರಿದರೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ ಪಿ ಅವರು ಎಚ್ಚರಿಸಿದ್ದಾರೆ.

ವಿಡಿಯೋಗಾಗಿ…

Share Information
Continue Reading
Advertisement
Click to comment

Leave a Reply

Your email address will not be published. Required fields are marked *