FILM
ಅರ್ಜುನ್ ಸರ್ಜಾ ಅಳಿಯ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ
ಹೃದಯಾಘಾತದಿಂದ ಇಂದು ಸಾವು
ಬೆಂಗಳೂರು, ಜೂನ್ 7 : ಉದಯೋನ್ಮುಖ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಚಿರಂಜೀವಿ, ಇಂದು ಮಧ್ಯಾಹ್ನ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿತ್ತು.
ಚಿರಂಜೀವಿ ಸರ್ಜಾಗೆ ನಿನ್ನೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು . ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವಕನಾಗಿದ್ದರಿಂದ ಹೃದಯ ಸಂಬಂಧಿ ಕಾಯಿಲೆ ಇರಬಹುದು ಎಂದು ಕುಟುಂಬದವರು ಭಾವಿಸಿರಲಿಲ್ಲ. ಆದರೆ, ಉಸಿರಾಟದ ತೊಂದರೆ ಜೊತೆಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತಂತೆ. ಹೀಗಾಗಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಅದಾಗಲೇ ಅವರಿಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.
ಆಸ್ಪತ್ರೆ ವೈದ್ಯರು ಅವರಿಗೆ ಚಿಕಿತ್ಸೆ ನೀಡಲು ತುಂಬಾನೆ ಪ್ರಯತ್ನ ಪಟ್ಟಿದ್ದರು. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗಿಲ್ಲ. ನಿಯಮಗಳಂತೆ ಅವರ ಸ್ವಾಬ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಿಸಲಾಗಿದೆ. ನಿನ್ನೆಯ ಅನಾರೋಗ್ಯಕ್ಕೆ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಕೊರೊನಾ ಬಾಧಿತರಾಗಿದ್ದರೇ ಅನ್ನುವುದು ಇನ್ನಷ್ಟೇ ಕನ್ಫರ್ಮ್ ಆಗಬೇಕಷ್ಟೆ. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಕೊರೊನಾ ಸೋಂಕು ತಗಲಿರುವ ಸಾಧ್ಯತೆಯೂ ಇದೆ ಅನ್ನುವ ಶಂಕೆಯನ್ನ ವೈದ್ಯರು ವ್ಯಕ್ತಪಡಿಸಿದ್ದಾರೆ. ಸಿಂಗ, ಅಮ್ಮ ಐ ಲವ್ ಯು, ಚಿರು, ಸಂಹಾರ, ಅಜಿತ್, ಅಟಗಾರ, ರುದ್ರ ತಾಂಡವ , ಆಕೆ, ಖಾಕಿ, ದಂಡಂ ದಶಗುಣಂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಚಿರಂಜೀವಿ, ಖ್ಯಾತ ನಟ ಅರ್ಜುನ್ ಸರ್ಜಾ ಸೋದರ ಸಂಬಂಧಿಯಾಗಿದ್ದರು.
You must be logged in to post a comment Login