DAKSHINA KANNADA
ಮಾಸ್ಕ್ ವಿಚಾರದಲ್ಲಿ ಪುತ್ತೂರಿನಲ್ಲಿ ಹಾಡುಹಗಲೇ ಹೊಡೆದಾಟ….!!

ಮಾಸ್ಕ್ ವಿಚಾರದಲ್ಲಿ ಪುತ್ತೂರಿನಲ್ಲಿ ಹಾಡುಹಗಲೇ ಹೊಡೆದಾಟ….!!
ಪುತ್ತೂರು : ಮಾಸ್ಕ್ ಧರಿಸದೇ ಖರೀದಿಗೆ ಬಂದ ಗ್ರಾಹಕನಿಗೆ ಮಳಿಗೆ ಒಳಗಡೆ ಪ್ರವೇಶ ನಿರಾಕರಿಸದ್ದಕ್ಕೆ ರಸ್ತೆಯಲ್ಲೇ ಪರಸ್ವರ ಹೊಡೆದಾಟ ನಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ನಗರದ ದರ್ಭೆಯಲ್ಲಿರುವ ರಿಲಾಯನ್ಸ್ ಮಾರ್ಟ್ ಮಳಿಗೆಯ ಮುಂಭಾಗದಲ್ಲಿ ಘಟನೆ ನಡೆದಿದೆ. ಅಲ್ಲಿಗೆ ಖರೀದಿಗೆ ಆಗಮಿಸಿದ ಗ್ರಾಹಕನೊಬ್ಬ ಮಾಸ್ಕ್ ಧರಿಸದೇ ಸರತಿಯ ಸಾಲಿನಲ್ಲಿ ನಿಂತಿದ್ದ. ಕೋವಿಡ್ 19ರ ನಿಯಂತ್ರಣದ ನಿಯಮದಂತೆ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುವುದರಿಂದ ಅಲ್ಲಿದ್ದ ಕೆಲ ಗ್ರಾಹಕರು ಮಳಿಗೆ ಪ್ರವೇಶಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು ಹಾಗೂ ಮಳಿಗೆಯ ಸೆಕ್ಯೂರಿಟಿ ಸಿಬ್ಬಂದಿಗಳು ಆ ವ್ಯಕ್ತಿಯ ಪ್ರವೇಶಕ್ಕೆ ತಡೆಯೊಡ್ಡಿದ್ದಾರೆ.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಸ್ಕ್ ಧರಿಸದ ವ್ಯಕ್ತಿ ಮಳಿಗೆ ಸಿಬ್ಬಂದಿಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದೂ ,ಜಗಳ ತಾರಕಕ್ಕೆ ಹೋಗಿ ಆ ವ್ಯಕ್ತಿಯೂ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಜೊತೆಗೆ ವಾಗ್ವಾದ ತಾರಕಕ್ಕೆ ಹೋಗುತ್ತಲೇ ಆ ಯುವಕ ತನ್ನ ಸಮುದಾಯದ ಯುವಕರಿಗೆ ಸ್ಥಳದಲ್ಲೇ ಜಮಾಯಿಸುವಂತೆ ಸಂದೇಶ ರವಾನಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಮಾಸ್ಕ್ ಧರಿಸದ ಯುವಕನ ಪರವಾಗಿ ಸ್ಥಳದಲ್ಲಿ ಹಲವಾರು ಜಮಾಯಿಸಿದ್ದು ಇತ್ತಂಡಗಳ ನಡುವೆ ಘರ್ಷಣೆ ನಡೆದಿದ್ದೂ ಕೂಡಲೇ ಸ್ಥಳಕ್ಕೆ ಪೋಲೀಸರು ಆಗಮಿಸುತಿದ್ದಂತೆ ತಂಡ ಸ್ಕೂಟರ್ ಬಿಟ್ಟು ಪರಾರಿಯಾಗಿದೆ. ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳದಲ್ಲಿದ್ದ ಒಂದಿಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ನಂತರದ ಬೆಳವಣಿಗೆಯಲ್ಲಿ ಇತ್ತಂಡಗಳು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.