Connect with us

UDUPI

ಕೇವಲ ಒಂದು ರೂಪಾಯಿ ಚಿಲ್ಲರೆಗಾಗಿ ಸಾಸ್ತಾನ ಟೋಲ್ ಗೇಟ್ ನಲ್ಲಿ ಹೊಡೆದಾಟದ ವಿಡಿಯೋ….!

ಉಡುಪಿ ಜುಲೈ 6: ಕೇವಲ ಒಂದು ರೂಪಾಯಿಗಾಗಿ ಉಡುಪಿಯ ಟೋಲ್‌ ಗೇಟ್‌ನಲ್ಲಿ ಹೊಡೆದಾಟ- ಬಡಿದಾಟದ ಘಟನೆ ವರದಿಯಾಗಿದೆ. ಉಡುಪಿಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಈ ಒಂದು ರೂಪಾಯಿ ವಿಚಾರವಾಗಿ ಗಲಾಟೆ ನಡೆದಿದೆ. 5 ರೂಪಾಯಿ ಚಿಲ್ಲರೆ ಬದಲಿಗೆ ಟೋಲ್‌ ಸಿಬಂದಿ 4 ರೂಪಾಯಿ ನೀಡಿದ್ದರು. ಒಂದು ರೂಪಾಯಿ ಚಿಲ್ಲರೆ ನೀಡಿಲ್ಲ ಎನ್ನುವ ಕಾರಣಕ್ಕೆ ಪ್ರಾರಂಭವಾದ ಗಲಾಟೆ ಹೊಡೆದಾಟದಲ್ಲಿ ಮಗಿದಿದೆ.


ಒಂದು ರೂಪಾಯಿಗೆ ಮಾಸ್ಕ್, ಸಾಮಾಜಿಕ ಅಂತರ ಮರೆತ ವಾಹನದಲ್ಲಿ ಬಂದಿದ್ದ ಯುವಕರು ಟೋಲ್ ಸಿಬ್ಬಂದಿಯನ್ನು ತಳ್ಳಿ ಗಲಾಟೆ ಆರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಗುಂಪುಗೂಡಿದ ಇತ್ತಂಡಗಳು ಗುಂಪು ಘರ್ಷಣೆಯನ್ನೇ ನಡೆಸಿವೆ. ಈ ಸಂದರ್ಭದಲ್ಲಿ ಟೋಲ್ ಗೇಟ್ ನಲ್ಲಿ ಪೊಲೀಸ್ ಸಿಬ್ಬಂದಿ ಇರಲಿಲ್ಲ ಎನ್ನಲಾಗಿದೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Facebook Comments

comments