LATEST NEWS
ಮಂಗಳೂರು ಮಹಾನಗರಪಾಲಿಕೆಯಲ್ಲಿ ಮೈಕ್ ಗಾಗಿ ಕಿತ್ತಾಟ

ಮೈಕ್ ಗಾಗಿ ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಿತ್ತಾಟ
ಮಂಗಳೂರು ಡಿಸೆಂಬರ್ 26: ಮೈಕ್ ಗಾಗಿ ಮಹಾನಗರಪಾಲಿಕೆಯ ಸದಸ್ಯರು ಕಿತ್ತಾಡಿಕೊಂಡ ಘಟನೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ನಡೆದಿದೆ.
ಇಂದು ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಸದಸ್ಯರೊಬ್ಬರು ತನ್ನ ವಾರ್ಡಿನಲ್ಲಿರೋ ನೀರಿನ ಹಾಗೂ ಇತರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದ ಸಂದರ್ಭ ಆಡಳಿತ ಪಕ್ಷದ ಸಚೇತಕು ಉತ್ತರ ನೀಡುವಾಗ ಈ ಘಟನೆ ನಡೆದಿದೆ.

ನೀರಿನ ಸಮಸ್ಯೆ ಬಗ್ಗೆ ಉತ್ತರ ನೀಡಿದ ಆಡಳಿತ ಪಕ್ಷದ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಳೆದ ನಾಲ್ಕು ವರ್ಷಗಳಿಂದ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು. ಈ ಸಂದರ್ಭ ಸಚೇತಕರ ವಿರುದ್ಧ ಮಹಿಳಾ ಕಾರ್ಪೊಟರ್ ಪೂರ್ಣಿಮಾ ಅಕ್ರೋಶಿತ ರೀತಿಯಲ್ಲಿ ಮೈಕ್ ಎಳೆದಿದ್ದಾರೆ. ಸಚೇತಕ ಶಶಿಧರ್ ಹೆಗ್ಡೆ ಹಾಗೂ ಮಹಿಳಾ ಸದಸ್ಯೆ ಪೂರ್ಣಿಮಾ ಇಬ್ಬರು ಒಂದೇ ಮೈಕ್ ನಲ್ಲಿ ತಮ್ಮದೇ ವಾದ ಮಂಡಿಸೋಕ್ಕೆ ಕಿತ್ತಾಡಿಕೊಂಡರು.
ಮಹಿಳಾ ಸದಸ್ಯೆ ಪೂರ್ಣಿಮಾ ತಾನಿದ್ದ ಜಾಗ ಬಿಟ್ಡು ಸಚೇತಕರ ಮೈಕ್ ಕಸಿದು ಮಾತಾಡೋ ಮೂಲಕ ಪ್ರತಿಭಟಿಸಿದರು. ಇದಕ್ಕೆ ಬಿಜೆಪಿ ಸದಸ್ಯರೆಲ್ಲಾರು ಸಾಥ್ ನೀಡಿದ್ರು. ಈ ವೇಳೆ ಮಧ್ಯೆ ಪ್ರವೇಶಿಸಿದ ಮೇಯರ್ ಭಾಸ್ಕರ್ ಮೊಯ್ಲಿಯವರನ್ನ ವಿರೋಧ ಪಕ್ಷದ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು. ಎರಡು ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಕೂಡಾ ನಡೆಯಿತು.