LATEST NEWS
ಸೌರ ಮಾರುತಕ್ಕೆ ಸುಟ್ಟು ಹೋದ ಸ್ಪೇಸ್ ಎಕ್ಸ್ ನ 40 ಸ್ಯಾಟಲೈಟ್
ಅಮೇರಿಕಾ : ಉಪಗ್ರಹದ ಮೂಲಕ ಪ್ರಪಂಚಕ್ಕೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ಸ್ವೇಸ್ ಎಕ್ಸ್ ನ ಮಹತ್ವಾಕಾಂಕ್ಷೆ ಯೋಜನೆಗೆ ಬಾರಿ ಹೊಡೆದ ಬಿದ್ದಿದ್ದು, ಅಂತರಿಕ್ಷದಲ್ಲಿ ನಡೆದ ಸೌರ ಮಾರುತಕ್ಕೆ ಸಿಲುಕಿರುವ ಸ್ಪೇಸ್ ಎಕ್ಸ್‌ನ ಸುಮಾರು 40 ಉಪಗ್ರಹಗಳು ಕಕ್ಷೆಯಿಂದ ಪತನಗೊಂಡಿವೆ ಎಂದು ವರದಿಯಾಗಿದೆ.
ಕಳೆದ ವಾರ ಉಡಾವಣೆಗೊಂಡ 49 ಸಣ್ಣ ಉಪಗ್ರಹಗಳ ಪೈಕಿ 40ರಷ್ಟು ಉಪಗ್ರಹಗಳು ವಾತಾವರಣಕ್ಕೆ ಮರುಪ್ರವೇಶಿಸಿ ಸುಟ್ಟು ಹೋಗಿವೆ ಅಥವಾ ಪತನದ ಅಂಚಿನಲ್ಲಿವೆ ಎಂದು ಕಂಪನಿಯು ತಿಳಿಸಿದೆ.
ಈ ನಡುವೆ ಸ್ಪೇಸ್ ಎಕ್ಸ್ ಉಪಗ್ರಹಗಳನ್ನು ಸಂರಕ್ಷಿಸಲು ನಡೆಸಿದ ಎಲ್ಲ ಯತ್ನಗಳು ವಿಫಲಗೊಂಡಿವೆ. ಭೂಮಿಯ ಕಕ್ಷೆಯಲ್ಲಿ ಸ್ಪೇಸ್ ಎಕ್ಸ್ ಇನ್ನೂ ಸುಮಾರು 2,000 ಸ್ಟಾರ್ ಲಿಂಕ್ ಉಪಗ್ರಹಗಳನ್ನು ಹೊಂದಿದೆ.ಕಕ್ಷೆಯಲ್ಲಿ ಅಥವಾ ನೆಲದ ಮೇಲೆ ಬೀಳುವ ಉಪಗ್ರಹಗಳಿಂದ ಯಾವುದೇ ಅಪಾಯವಿಲ್ಲ. ಪ್ರತಿ ಉಪಗ್ರಹವು 260 ಕೆ.ಜಿಗಿಂತಲೂ ಕಡಿಮೆ ಭಾರವನ್ನು ಹೊಂದಿದೆ ಎಂದು ತಿಳಿಸಿದೆ.