LATEST NEWS
ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ನಲ್ಲಿ ಬೆಂಕಿ ಅವಘಡ – ಅಪಾರ ಹಾನಿ

ಮಂಗಳೂರು ಎಪ್ರಿಲ್ 15: ಮಂಗಳೂರಿನ ಲಾಲ್ ಬಾಗ್ ಬಳಿ ಇರುವ ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ನಲ್ಲಿ ರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಮಧ್ಯರಾತ್ರಿ ಸಂದರ್ಭ ನಡೆದ ಈ ಘಟನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗಿದೆ. ಬೆಂಕಿಯ ಕೆನ್ನಾಲಗೆಗೆ ಇಡೀ ಮಾಲ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
