LATEST NEWS
ಐಬ್ರೊ ಗೂ ಫತ್ವಾ
ಐಬ್ರೊ ಗೂ ಫತ್ವಾ
ಉತ್ತರ ಪ್ರದೇಶ ಅಕ್ಟೋಬರ್ 9: ಕೊಲ್ಲಿ ರಾಷ್ಟ್ರಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ವಾಹನ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಭಾರತದಲ್ಲಿ ಮುಸ್ಲಿಂ ಮಹಿಳೆಯರು ಇನ್ನೂ ತಮ್ಮ ಹುಬ್ಬುಗಳ ಸೌಂದರ್ಯ, ಹಾಗು ತಲೆ ಕೂದಲಿನ ಬಗ್ಗೆ ಯೋಚನೆ ಮಾಡುವ ಹಾಗಿಲ್ಲ. ಐಬ್ರೊ ಮಾಡಿಸುವುದು ಮತ್ತು ತಲೆ ಕೂದಲು ಕತ್ತರಿಸುವುದು ಇಸ್ಲಾಮ್ ಗೆ ವಿರುದ್ಧವಾಗಿದ್ದು, ಐಬ್ರೊ ಮಾಡಿಸುವುದನ್ನು ಹಾಗೂ ಕೂದಲನ್ನು ಕತ್ತರಿಸುವುದನ್ನು ನಿಷೇಧಿಸಿ ಉತ್ತರ ಪ್ರದೇಶದ ದರುಲ್ ಉಲೂಮ್ ದಿಯೋಬಂದ್ ಸಂಸ್ಥೆಯೊಂದು ಫತ್ವಾ ಹೊರಡಿಸಿದೆ.
ಫತ್ವಾ ಏನು ಹೇಳುತ್ತದೆ
ಮುಸ್ಲಿಂ ಧರ್ಮದಲ್ಲಿ ಮಹಿಳೆಯರಿಗೆ ಕೂದಲು ಕತ್ತರಿಸುವುದು ಹಾಗೂ ಐಬ್ರೊ ಮಾಡಿಸುವುದು ನಿಷೇಧಿಸಲಾಗಿದೆ, ಅಲ್ಲದೇ ಇನ್ನೂ ಇಂತಹ ಹತ್ತು ನಿಷೇಧಗಳು ಮಹಿಳೆಯರಿಗೆ ವಿಧಿಸಲಾಗಿದೆ. ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಗೆ ತೆರಳಲು ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ, ಅಷ್ಟೇ ಅಲ್ಲ ಪುರುಷರಿಗೂ ಗಡ್ಡವನ್ನು ಶೇವ್ ಮಾಡಿಸಲು ಅನುಮತಿ ಇಲ್ಲ.
ಮುಸ್ಲಿಂ ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ತೆರಳುವುದು ವಿಕೃತಿಯ ಸಂಕೇತ. ಇದು ಸಾಂಪ್ರದಾಯಿಕ ಮುಸ್ಲಿಂ ರ ಲಕ್ಷಣವಲ್ಲ. ಈ ಹಿನ್ನೆಲೆಯಲ್ಲಿ ಈ ಕೂಡಲೇ ನಿಲ್ಲಸಬೇಕು ಎಂದು ಫತ್ವಾದಲ್ಲಿ ತಿಳಿಸಲಾಗಿದೆ.