Connect with us

    KARNATAKA

    41 ದಿನಗಳ ವೃತ ಆಚರಿಸಿ ಶಬರಿಮಲೆಗೆ ಹೊರಟ ಕ್ರೈಸ್ತ ಪಾದ್ರಿ ಫಾದರ್ ಡಾ.ಮನೋಜ್

    ಕೇರಳ ಸೆಪ್ಟೆಂಬರ್ 08: ಶಬರಿಮಲೆ ಎಲ್ಲಾ ಧರ್ಮದವರಿಗೂ ತೆರೆದಿರುವಂತಹ ದೇವಾಲಯ. ಇತರ ಧರ್ಮದವರೂ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಸಾಮಾನ್ಯ ಜನರು ಕೈಗೊಳ್ಳುವ ಶಬರಿಮಲೆ ಯಾತ್ರೆಯನ್ನು ಈ ಬಾರಿ ಕ್ರೈಸ್ತ ಧರ್ಮದ ಪಾದ್ರಿಯೊಬ್ಬರು ಕೈಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.


    ಆಂಗ್ಲಿಕನ್ ಪಾದ್ರಿ ಫಾದರ್ ಡಾ.ಮನೋಜ್ ಅವರು 41 ದಿನಗಳ ಉಪವಾಸದ ನಂತರ ಶಬರಿಮಲೆ ಯಾತ್ರೆ ಕೈಗೊಳ್ಳಲು ಸಜ್ಜಾಗಿದ್ದಾರೆ. ಚರ್ಚ್ ಆಫ್ ಸೌತ್ ಇಂಡಿಯಾ (CSI) ಸಮುದಾಯದಲ್ಲಿ ಜನಿಸಿದ ಫಾದರ್ ಮನೋಜ್ ಅವರು 2010 ರಲ್ಲಿ ಆಂಗ್ಲಿಕನ್ ಚರ್ಚ್‌ನಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದರು. ಬಳಿಕ ಪಿಎಚ್‌ಡಿ ಮಾಡಿದ್ದಾರೆ. ಬೆಂಗಳೂರಿನ ಖಾಯಂ ನಿವಾಸಿ ಫಾ. ಮನೋಜ್ 27 ವರ್ಷಗಳಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.


    ರೆವರೆಂಡ್‌ ಡಾ.ಮನೋಜ್‌ ಕೆ.ಜಿ. ಅವರಿಗೆ ಶಬರಿಮಲೆ ದರ್ಶನಕ್ಕೆ ಅನಾದಿ ಕಾಲದಿಂದಲೇ ಆಸೆ ಇತ್ತು. ಈ ದಿನಗಳಲ್ಲಿಅನ್ಯ ಧರ್ಮದವರು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆಯುವುದು ದೊಡ್ಡ ವಿಚಾರವಲ್ಲ. ಆದರೆ ಕ್ರೈಸ್ತ ಪಾದ್ರಿಯೊಬ್ಬರು ಮಹತ್ತರ ಉದ್ದೇಶದಿಂದ ಅಯ್ಯಪ್ಪನ ದರ್ಶನಕ್ಕೆ ಸಿದ್ಧತೆ ನಡೆಸಿರುವುದು ವಿಶೇಷತೆಯಾಗಿದೆ. ಈಗಾಗಲೇ ಮಾಲೆ ಧರಿಸಿ ವೃತಾಚರಣೆಯಲ್ಲಿರುವ ಮನೋಜ್ ಸೆಪ್ಟೆಂಬರ್ 20 ರಂದು ಅಯ್ಯಪ್ಪನ ದರ್ಶನಕ್ಕೆ ತೆರಳಲಿದ್ದಾರೆ.

    ”ದೇವರು ಒಬ್ಬನೇ. ಧರ್ಮಗಳು ಮಾತ್ರ ದೇವರನ್ನು ವಿವಿಧ ರೀತಿಯಲ್ಲಿ ನೋಡುತ್ತವೆ. ಎಲ್ಲಾ ಧರ್ಮಗಳು ಒಂದನ್ನು ಹೇಳುತ್ತವೆ. ದೇವರನ್ನು ಧರ್ಮದ ಬೇಲಿಗೆ ಸೀಮಿತಗೊಳಿಸುವಂತಿಲ್ಲ. ಇದನ್ನು ಪ್ರತಿಯೊಬ್ಬರೂ ಅರಿತುಕೊಂಡರೆ ಜಗತ್ತಿನಲ್ಲಿ ಸಮಸ್ಯೆ ಇದೆ. ಬೇರೆ ಧರ್ಮಗಳನ್ನು ತಿಳಿದುಕೊಳ್ಳಲು ಧರ್ಮವನ್ನು ಬಿಟ್ಟು ಹೋಗುವ ಅಗತ್ಯವಿಲ್ಲ. ಎಲ್ಲ ಧರ್ಮಗಳು ಮಾನವ ಒಳಿತನ್ನೇ ಗುರಿಯಾಗಿಸಿಕೊಂಡಿವೆ’ ಎನ್ನುತ್ತಾರೆ ಫಾ.ಮನೋಜ್.

    Share Information
    Advertisement
    Click to comment

    You must be logged in to post a comment Login

    Leave a Reply