DAKSHINA KANNADA
ನೀರುಮಾರ್ಗ ಪಡುವಿನಲ್ಲಿ ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ..!

ಮಂಗಳೂರು, ಡಿಸೆಂಬರ್ 11: ಮಂಗಳೂರು ಹೊರವಲಯದ ನೀರುಮಾರ್ಗ ಪಡು ಸಮೀಪ ಯುವಕನಿಗೆ ತಂಡವೊಂದು ಮಾರಕಾಯುಧದಿಂದ ಗಂಭೀರ ಹಲ್ಲೆ ನಡೆಸಿದ ಘಟನೆ ಇಂದು ರಾತ್ರಿ ಸಂಭವಿಸಿದೆ.
ನೀರುಮಾರ್ಗ ಸಮೀಪ ಪಡು ಪೋಸ್ಟ್ ಆಫೀಸ್ ಬಳಿಯ ಬಿತ್ತ್‌ಪಾದೆ ಎಂಬಲ್ಲಿ ಈ ಘಟನೆ ಇಂದು ಶುಕ್ರವಾರ ರಾತ್ರಿ ನಡೆದಿದ್ದು ಅಡ್ಯಾರ್ ಪದವಿನ ರಿಯಾಝ್ ಅಹ್ಮದ್ (38) ಎಂಬವರು ಗಂಭಿರ ಗಾಯಗೊಂಡಿದ್ದಾರೆ.

ರಿಯಾಝ್ ಅಹ್ಮದ್ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ನಾಲ್ಕು ಜನರ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಬಳಿಕ ಪರಾರಿಯಾಗಿದೆ. ಗಂಭೀರ ಗಾಯಗೊಂಡ ರಿಯಾಝ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಹಿರಿಯಪೊಲೀಸ್ ಅಧಿಕಾರಿಗಳು ಧಾವಿಸಿದ್ದು ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಲಾಗಿದೆ ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.