Connect with us

LATEST NEWS

ಬೆಳ್ಮಣ್ಣ್ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕಿಚ್ಚ ಸುದೀಪ್ ಭೇಟಿ – ಚಂಡಿಕಾಯಾಗದಲ್ಲಿ ಭಾಗಿ

ಉಡುಪಿ ಡಿಸೆಂಬರ್ 10: ಕರಾವಳಿಯ ಪ್ರವಾಸದಲ್ಲಿರುವ ಕನ್ನಡ ಚಿತ್ರನಟ ಕಿಚ್ಚ ಸುದೀಪ್ ಇಂದು ಉಡುಪಿಯ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.


ನಿನ್ನೆ ಮಂಗಳೂರಿನ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದು ಸುದೀಪ್ ಇಂದು ಕಾರ್ಕಳ ತಾಲೂಕಿನ ಬೆಳ್ಮಣ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದು. ದೇವಸ್ಥಾನದಲ್ಲಿ ದೇವಿಯ ಸನ್ನಿಧಿಯಲ್ಲಿ ನಡೆದ ಕುಟುಂಬದ ಹರಕೆಯ ಚಂಡಿಕಾ ಯಾಗದಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾದರು.


ಪೂಜೆಯ ನಂತರ ಅನ್ನ ಪ್ರಸಾದವನ್ನು ಸ್ವೀಕಾರ ಮಾಡಿದ ಅವರನ್ನು ದೇವಳದ ಪರವಾಗಿ ಆಡಳಿತ ಮೊಕ್ತೇಸರ ವಿಘ್ನೇಶ ಭಟ್ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಗಂಧ ಪ್ರಸಾದ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿ ಮುಂದಿನ ಚಿತ್ರ ಜೀವನ ಯಶಸ್ಸು ತರಲೆಂದು ಪ್ರಾರ್ಥಿಸಿ ಹಾರೈಸಿದರು.

Advertisement
Click to comment

You must be logged in to post a comment Login

Leave a Reply