Connect with us

LATEST NEWS

ಗೋಕಳ್ಳರನ್ನು ಬಂಧಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಗೋಕಳ್ಳರನ್ನು ಬಂಧಿಸಲು ಆಗ್ರಹಿಸಿ ಉಪವಾಸ ಸತ್ಯಾಗ್ರಹ

ಮಂಗಳೂರು ಏಪ್ರಿಲ್ 2: ಗೋಶಾಲೆಯಿಂದಲೇ ತಲವಾರು ಜಳಪಿಸಿ ದುಷ್ಕರ್ಮಿಗಳು ದನಗಳನ್ನು ಕಳವುಮಾಡಿರುವುದನ್ನು ವಿರೋಧಿಸಿ ಮಂಗಳೂರು ತಾಲೂಕಿನ ಮುಡಿಪು ವಲಯದ ಕೈರಂಗಳ‌ಪುಣ್ಯಕೋಟಿ ನಗರದ ಅಮೃತಧಾರಾ ಗೋ ಶಾಲೆ ಯಲ್ಲಿ ಅಮರಣಾತ ಉಪವಾಸ ಸತ್ಯಗೃಹ ಕೈಗೊಳ್ಳಲಾಗಿದೆ.

ಅಮೃತಧಾರಾ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಅವರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಪರಿಸರದ ಸ್ಥಳಿಯ ಜನರೂ ಬೆಂಬಲ‌ ಸೂಚಿಸಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಾರೆ. ಗೋಕಳ್ಳರನ್ನು ಬಂಧಿಸಿ, ಅವರು ತಪ್ಪೊಪ್ಪಿಕೊಳ್ಳುವ ತನಕ ಸತ್ಯಾಗ್ರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಧರಣಿ ನಿರತರು ಘೋಷಿಸಿದ್ದಾರೆ.

ಸತ್ಯಾಗ್ರಹಕ್ಕೆ ಸೂಕ್ತ ಸ್ಪಂದನೆ ವ್ಯಕ್ತವಾಗದಿದ್ದಲ್ಲಿ ನಾಳೆಯಿಂದ ಸರಣಿ ಧರಣಿ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು, ಈ ಹಿಂದೆ ದುಷ್ಕರ್ಮಿಗಳಿಂದ ದನಗಳನ್ನು ಕರೆದುಕೊಂಡ ಸಂತ್ರಸ್ತರನ್ನೂ ಕರೆತಂದು ಹೋರಾಟ ತೀವ್ರಗೊಳಿಸಲಾಗುವುದು ಎಂದು ಧರಣಿನಿರತರು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *