Connect with us

    LATEST NEWS

     ಕುಖ್ಯಾತ ಅಂತರ್ ಜಿಲ್ಲಾ ಜಾನುವಾರು ಕಳ್ಳನ ಬಂಧನ

     ಕುಖ್ಯಾತ ಅಂತರ್ ಜಿಲ್ಲಾ ಜಾನುವಾರು ಕಳ್ಳನ ಬಂಧನ

    ಮಂಗಳೂರು,ಎಪ್ರಿಲ್ 01 : ಕೊಲೆ,ಕೊಲೆಯತ್ನ ಜಾನುವಾರು ಕಳ್ಳತನ ಮುಂತಾದ 25 ಪ್ರಕರಣಗಳಲ್ಲಿ ಭಾಗಿಯಾಗಿದ್ದ,

    ಸುಮಾರು 10 ಪ್ರಕರಣಗಳಲ್ಲಿ ಪೊಲೀಸರಿಗೆ ಸಿಗದೇ ತಪ್ಪಿಸಿಕೊಂಡಿದ್ದ ಅಂತರ್ ಜಿಲ್ಲಾ ಕುಖ್ಯಾತ ಜಾನುವಾರು ಕಳ್ಳನನ್ನು ಮಂಗಳೂರು ಪೋಲಿಸರು ಬಂಧಿಸಿದ್ದಾರೆ.

    ಇವನೇ ಬಂಟ್ವಾಳ ತಾಲೂಕು ಪುದು ಗ್ರಾಮದ ಅಮ್ಮೆಮಾರ್ ಇಮ್ರಾನ್  ಯಾನೆ  ಕುಟ್ಟ .

    ಖಚಿತ ಸುಳಿವಿನ ಮೇರೆಗೆ ಆರ್ಕುಳ ಗೇಟ್ ಬಳಿ ಮಂಗಳೂರು ದಕ್ಷಿಣ ಎ.ಸಿ.ಪಿ ರಾಮರಾವ್ ನೇತೃತ್ವದ ರೌಡಿ ನಿಗ್ರಹ ದಳ ಈತನನ್ನು ಬಂಧಿಸಿದೆ.

    ಈತ ದನ ಕಳವು ಮಾಡಲು ಉಪಯೋಗಿಸಿದ ಮಾರುತಿ ಓಮ್ನಿ ಯನ್ನೂ ಪೋಲಿಸರು ವಶಪಡಿಸಿಕೊಂಡಿದ್ದಾರೆ.

    ಆರೋಪಿ ಇಮ್ರಾನ್ ಮೇಲೆ ಸುಮಾರು 25 ಜಾನುವಾರು ಕಳ್ಳತನ ಪ್ರಕರಣಗಳು ನಗರದ ವಿವಿಧ ಠಾಣೆಗಳಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ದಾಖಲಾಗಿರುತ್ತದೆ.

    ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ 3 ಜಾನುವಾರು ಕಳ್ಳತನ ಪ್ರಕರಣ , ಬಜ್ಪೆ ಠಾಣೆಯಲ್ಲಿ ಒಂದು ಜಾನುವಾರು ಕಳ್ಳತನ ಪ್ರಕರಣ , ಕೊಣಾಜೆ ಠಾಣಾ ಸರಹದ್ದಿನಲ್ಲಿ 3 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿದ್ದು,

    ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು, ಬಂಟ್ವಾಳ ಠಾಣಾ ಸರಹದ್ದಿನಲ್ಲಿ 8 ಪ್ರಕರಣದಲ್ಲಿ ದಾಖಲಾಗಿರುತ್ತದೆ.

    2017 ರಲ್ಲಿ ಕೊಡಗು ಜಿಲ್ಲೆಯಲ್ಲಿ ಈತನ ವಿರುದ್ದ 7 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

    ಶನಿವಾರಸಂತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 3 ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಜಾನುವಾರು ಕಳ್ಳತನ ಸಮಯ 2 ಕೊಲೆಯತ್ನ ಪ್ರಕರಣ ಮತ್ತು ಒಂದು ಜಾನುವಾರು ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.

    ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ 3 ಜಾನುವಾರು ಕಳ್ಳತನ ಪ್ರಕರಣ ಮತ್ತು ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಜಾನುವಾರು ಕಳ್ಳತನ ಪ್ರಕರಣವು ದಾಖಲಾಗಿರುತ್ತದೆ.

    ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಈತನ ವಿರುದ್ದ 2 ಪ್ರಕರಣ ದಾಖಲಾಗಿರುತ್ತದೆ. ಲಾರಿ ಚಾಲಕನ ಕೊಲೆ ಮತ್ತು ವಾಹನ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
    ಈ ಮೇಲಿನ ಪ್ರಕರಣಗಳಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ 3 ಜಾನುವಾರು ಕಳ್ಳತನ ಪ್ರಕರಣ ಮತ್ತು ಕೊಡಗು ಜಿಲ್ಲೆಯ 7 ಜಾನುವಾರು ಕಳ್ಳತನ ಪ್ರಕರಣಗಳಲ್ಲಿ ಆರೋಪಿಯು ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದನು.

    ಸುಮಾರು ಒಂದು ತಿಂಗಳ ಹಿಂದೆ ಈತನ ಸಹಚರನಾದ ನಿಝಾಮ್ ಎಂಬಾತನನ್ನು ರೌಡಿ ನಿಗ್ರಹ ದಳ ಬಂಧಿಸಿತ್ತು.

    Share Information
    Advertisement
    Click to comment

    You must be logged in to post a comment Login

    Leave a Reply