Connect with us

    FILM

    ಖ್ಯಾತ ಹಿಂದಿ ನಟ ರಿತುರಾಜ್ ಸಿಂಗ್ ಹೃದಯಾಸ್ತಂಭನದಿಂದ ನಿಧನ..!

    ಮುಂಬೈ : ಹಿಂದಿ ಕಿರುತೆರೆ ಖ್ಯಾತ ನಟ ರಿತುರಾಜ್ ಸಿಂಗ್ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. 59 ವರ್ಷ ವಯಸ್ಸಿನ ರಿತುರಾಜ್ ಪ್ಯಾಂಕ್ರಿಯಾಟಿಕ್ ಕಾಯಿಲೆಯಿಂದ ಹಲವು ದಿನಗಳಿಂದ ಬಳಲುತ್ತಿದ್ದರು.

     

    15 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಮೇಲೆ ಚಿಕಿತ್ಸೆ ಪಡೆದು ಡಿಸ್ಚಾರ್ಜ್‌ ಆಗಿ ಮನೆಗೆ ಮರಳಿದರು. ಮತ್ತೆ ಸಮಸ್ಯೆ ಉಲ್ಭಣಿಸಿ ಸಾವನ್ನಪ್ಪಿದ್ದಾರೆ .ರಿತುರಾಜ್ ಅವರು ಬನೇಗಿ ಅಪ್ನಿ ಬಾತ್, ಜ್ಯೋತಿ ಹಿಟ್ಲರ್ ದೀದಿ, ಶಪತ್ ವಾರಿಯರ್ ಹೈ, ಸೇರಿದಂತೆ ಹಲವು ಶೋಗಳಲ್ಲಿ ನಟಿಸಿದ್ದಾರೆ. ಲಾಡೋ 2 ಸೀರಿಯಲ್‌ನಲ್ಲಿ ಬಲವಂತ ಚೌಧರಿ ಪಾತ್ರದಲ್ಲಿ ನಟಿಸಿದ್ದಾರೆ. ಅನುಪಮಾ ಸೀರಿಯಲ್‌ ರೀತುರಾಜ್‌ಗೆ ಹೆಚ್ಚು ಜನಪ್ರಿಯತೆ ಕೊಟ್ಟಿತ್ತು. ವರುಣ್ ಧವನ್ ನಟನೆಯ ‘ಬದ್ರಿನಾಥ್ ಕಿ ದುಲ್ಹನಿಯಾ’, ‘ಯಾರಿಯಾನ್ 2’ ಚಿತ್ರದಲ್ಲೂ ರಿತುರಾಜ್ ಅಭಿನಯಿಸಿದ್ದಾರೆ. ರಿತುರಾಜ್ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

     

    Share Information
    Advertisement
    Click to comment

    You must be logged in to post a comment Login

    Leave a Reply