LATEST NEWS
ಖ್ಯಾತ ಉದ್ಯಮಿ ರತನ್ ಟಾಟಾ ಅಸ್ತಂಗತ, ಜಗತ್ತಿನಾದ್ಯಂತ ಕಿಚ್ಚು ಹೊತ್ತಿಸಿದ ಟಾಟಾ ನಿಧನದ ಸುದ್ದಿ..!
ಮುಂಬೈ: ಭಾರತದ ಅತಿ ದೊಡ್ಡ ಸಮೂಹ ಸಂಸ್ಥೆ ಟಾಟಾ ಸನ್ಸ್ ನ ಗೌರವಾಧ್ಯಕ್ಷ ರತನ್ ಟಾಟಾ ಬುಧವಾರ ರಾತ್ರಿ ನಿಧನರಾಗಿದ್ದಾರೆ. 86 ವರ್ಷದ ರತನ್ ಟಾಟಾ ಅವರು ತಮ್ಮ ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಗೆ ಸೋಮವಾರ ಚಿಕಿತ್ಸೆಗೊಳಗಾಗಿದ್ದರು.
ಇಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. 1991ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ರತನ್ ಟಾಟಾ, ತಮ್ಮ ಸಂಸ್ಥೆಯನ್ನು 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು. ಡಿಸೆಂಬರ್ 2012ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿದ್ದ ರತನ್ ಟಾಟಾ, ನಂತರ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದರು. ರತನ್ ಟಾಟಾ ಅವರ ಸಾವಿನ ಸುದ್ದಿ ಇದೀಗ ಜಗತ್ತಿನಾದ್ಯಂತ ಕಿಚ್ಚು ಹೊತ್ತಿಸಿದೆ. ದೇಶದ ಉದ್ಯಮ ವಲಯಕ್ಕೆ ದೊಡ್ಡ ಸೇವೆ ಸಲ್ಲಿಸಿ, ತಮ್ಮ ಇಡೀ ಜೀವನವನ್ನೇ ಮುಡಿಪಾಗಿ ಇಟ್ಟಿದ್ದ ವ್ಯಕ್ತಿ ಇಂದು ಶತಕೋಟಿ ಭಾರತೀಯರನ್ನು ಬಿಟ್ಟು ಹೋಗಿದ್ದಾರೆ. ಈ ಮೂಲಕ ಭಾರತೀಯ ಉದ್ಯಮ ವಲಯವು ಇದೀಗ, ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನಲುಗಿ ಹೋಗಿದೆ.
ರತನ್ ಟಾಟಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹಿತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. 86 ವರ್ಷದ ರತನ್ ಟಾಟಾ, ತಮ್ಮ ಸಂಸ್ಥೆಯನ್ನು 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು. ತಮ್ಮದೇ ಸಂಸ್ಥೆಯ ಜ್ಯೂವೆಲ್ಲರಿ ಘಟಕವಾದ ತನಿಷ್ಕ್ ಬ್ರ್ಯಾಂಡ್ ಅನ್ನು, ಟಾಟಾ ಮೇಲೆತ್ತಿದ ಪರಿ ನಿಜಕ್ಕೂ ವಿಸ್ಮಯ.