LATEST NEWS
ವಾಹನಗಳ ನಕಲಿ ದಾಖಲೆ ಸೃಷ್ಟಿಸಿ ವಂಚನೆ,ಆರೋಪಿಗಳ ಬಂಧನ
ವಾಹನಗಳ ನಕಲಿ ದಾಖಲೆ ಸೃಷ್ಟಿಸಿ ವಂಚನೆ,ಆರೋಪಿಗಳ ಬಂಧನ
ಮಂಗಳೂರು,ಸೆಪ್ಟೆಂಬರ್ 24: ವಾಹನಗಳಿಗೆ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ವಂಚಿಸುತ್ತಿದ್ದ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ.
ಈ ವಂಚಕರ ಜಾಲ ವಾಹನಗಳ ನಕಲಿ ದಾಖಲೆ ಸೃಷ್ಟಿಸಿ ಹಾಗೂ ನಕಲಿ ನೊಂದಾಣೆ ಸಂಖ್ಯೆ ಅಳವಡಿಸಿ ವಾಹನಗಳನ್ನು ಉಪಯೋಗಿಸುತ್ತಿತ್ತು. ಈ ವಂಚಕರ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಮಂಗಳೂರು – ಮೂಡುಶೆಡ್ಡೆ ನಡುವೆ ರೂಟ್ ನಂಬರ್ 3ಬಿ ಯಲ್ಲಿ ಸಂಚರಿಸುವ ಬಸ್ಸಿಗೆ ನಕಲಿ ನೊಂದಾಣೆ ಸಂಖ್ಯೆಯನ್ನು ಅಳವಡಿಸಿ ಸಂಚಾರ ನಡೆಸುತ್ತಿದೆ ಎಂದು ಮಂಗಳೂರು ಸಿಸಿಬಿ ಪೊಲೀಸ್ ದೊರೆತ ಖಚಿತ ವರ್ತಮಾನ ದೊರೆತಿದೆ. ಈ ಹಿನ್ನೆಲೆಯಲ್ಲಿ ಬಸ್ಸನ್ನು ಮಂಗಳೂರು ನಗರದ ಮೂಡುಶೆಡ್ಡೆ ಬಳಿ ಪರಿಶೀಲಿಸಿದಾಗ ಈ ಬಸ್ಸಿಗೆ ಬೇರೆ ಬಸ್ಸಿನ ಚಾಸಿಸ್ ನಂಬ್ರವನ್ನು ಹಾಗೂ ನೊಂದಾಣೆ ಸಂಖ್ಯೆಯನ್ನು ಅಳವಡಿಸಿ ಓಡಾಟ ನಡೆಸುತ್ತಿರುವುದು ಬಯಲಾಗಿದ್ದು ಬಸ್ಸ್ ನ್ನು ಕೂಡಲೇ ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣ ಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ಉಲಾಯಿಬೆಟ್ಟು ನಿವಾಸಿ ನವೀನ್ ನೊರೊನ್ಹಾ,
ಬೆಂದೂರು ನಿವಾಸಿ ವಿನ್ಸೆಂಟ್ ಸಿಕ್ವೇರಾ(59), ನೀರುಮಾರ್ಗ ನಿವಾಸಿ ವಿಲ್ವೇಡ್ ಮಸ್ಕರೇನಸ್ ಎಂದು ಗುರುತಿಸಲಾಗಿದೆ.
ಆರೋಪಿ ನವೀನ್ ನೊರೊನ್ಹಾ ನ ಮಾಹಿತಿಯಂತೆ ಇದೇ ರೀತಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ನಕಲಿ ನೊಂದಾಣೆ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದ 2 ಟ್ರಕ್ ಹಾಗೂ ಒಂದು ಜೆಸಿಬಿ ಯನ್ನು ಹಾಗೂ ನಕಲಿ ಚಾಸಿಸ್ ನಂಬ್ರವನ್ನು ಸೃಷ್ಠಿ ಮಾಡಲು ಉಪಯೋಗಿಸಿದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಆಂದಾಜು ಮೌಲ್ಯ ರೂ. 81,09,000 ರೂಪಾಯಿ ಆಂದಾಜಿಸಲಾಗಿದೆ.ಈ ರೀತಿ ಸರಕಾರಕ್ಕೆ ತೆರಿಗೆ ಹಣ ಹಾಗೂ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆದು ಮರುಪಾವತಿ ಮಾಡದೇ ವಂಚನೆ ಮಾಡುವ ಈ ವ್ಯವಸ್ಥಿತ ಜಾಲದಲ್ಲಿ ಭಾಗಿಯಾದವರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ.