LATEST NEWS
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರಲ್ಲಿ ನಕಲಿ ಟ್ವಿಟ್

ಮಂಗಳೂರು ಜುಲೈ 14: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಹಿನ್ನಲೆಯ ಸಾವು ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೆಸರಿನಲ್ಲಿ ಬರೆಯಲಾದ ಟ್ವೀಟ್ ಒಂದು ಸಾಮಾಜಿಲ ಜಾಲತಾಣದಲ್ಲಿ ಹರಿದಾಡಲಾರಂಭಿಸಿದೆ.
ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿರುವುದು ಕೇವಲ ನಾಲ್ಕು ಜನ,ಉಳಿದ ಸಾವು ಕೊರೊನಾದ ಜೊತೆಗೆ ಇನ್ನುಳಿದ ಖಾಯಿಲೆಗಳಿಂದ ಸಂಭವಿಸಿರುವುದು ಎನ್ನುವುದನ್ನು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಹೆಸರಿನ ಟ್ವೀಟರ್ ಅಕೌಂಟ್ ನಲ್ಲಿ ವಿವಾದಿತ ಟ್ವೀಟ್ ಮಾಡಲಾಗಿದೆ.

ಕೊರೊನಾದಲ್ಲಿ ಕೇವಲ ನಾಲ್ಕು ಮಂದಿ ಬಲಿಯಾಗಿದ್ದಲ್ಲಿ,ಉಳಿದ ಮೃತದೇಹಗಳಿಗೆ ಪ್ಲಾಸ್ಟಿಕ್ ಕಟ್ಟಿ ದಫನ ಮಾಡಿದ್ದು ಯಾಕಾಗಿ? ಸ್ವಂತ ಮಕ್ಕಳಿಗೆ ತಮ್ಮ ತಾಯಿ ತಂದೆಯರನ್ನು ನೋಡಲು ಅವಕಾಶ ನೀಡದಿರುವುದರ ಹಿಂದಿನ ಉದ್ಧೇಶವೇನು. ದಕ್ಷಿಣಕನ್ನಡ ಜಿಲ್ಲೆಯ ಮರಣ ದಂಧೆ ನಡೆಯುತ್ತಿದೆ. ಕೊರೊನಾ ರೋಗಿಯ ಅಂಗಾಂಗವನ್ನು ಮಾರಾಟ ಮಾಡಲಾಗುತ್ತಿದೆಯಾ ಎನ್ನುವ ವಿವಾದಾತ್ಮಕ ಅಂಶಗಳನ್ನು ಈ ಟ್ವೀಟ್ ಒಳಗೊಂಡಿದೆ. ಈ ಟ್ವೀಟ್ ನ ಸ್ಕ್ರೀನ್ ಶಾಟ್ ಇದೀಗ ಸಾಮಾಜಿಕ ಜಾಲತಾಣಗಳ ತುಂಬೆಲ್ಲಾ ವೈರಲ್ ಆಗುತ್ತಿದ್ದು, ಜನ ಗೊಂದಲಕ್ಕೀಡಾಗುವಂತೆ ಮಾಡಿದೆ.