Connect with us

  LATEST NEWS

  ಮಂಗಳೂರು – ನಕಲಿ ಷೇರ್ ಮಾರ್ಕೆಟ್ ಟ್ರೆಡಿಂಗ್ ನಲ್ಲಿ 74 ಲಕ್ಷ ವಂಚನೆ

  ಮಂಗಳೂರು ಜುಲೈ 06 : ನಕಲಿ ಷೇರ್ ಮಾರ್ಕೆಟ್ ಟ್ರೆಡಿಂಗ್ ನಂಬಿ ಮಂಗಳೂರಿನ ವ್ಯಕ್ತಿಯೊಬ್ಬ 74,18,952 ರೂ. ವಂಚನೆಗೊಳಗಾದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


  ದೂರುದಾರ ಇನ್ಸ್ಟಾಗ್ರಾಂ ನಲ್ಲಿ ಬಂದ ಷೇರು ಟ್ರೆಡಿಂಗ್ ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ ಅದರ ಮೂಲಕ ನಕಲಿ ಟ್ರೆಡಿಂಗ್ ಅಕೌಂಟ್ ಕ್ರಿಯೆಟ್ ಮಾಡಿದ್ದಾರೆ. ನಂತರ ದೂರುದಾರರನ್ನು ಗ್ರೂಪ್ ಗೆ ಸೇರಿಸಿಕೊಂಡಿದ್ದಾರೆ. ಈ ಗ್ರೂಪ್‌ನಲ್ಲಿ ಷೇರು ಟ್ರೇಡಿಂಗ್ ಬಗ್ಗೆ ಆನ್ ಲೈನ್ ಮೂಲಕ ತರಬೇತಿಯನ್ನು ನೀಡಿದ್ದಾರೆ. ಎ.25 ರಂದು ಟ್ರೇಡಿಂಗ್ ಖಾತೆಯನ್ನು ತೆರೆಯಲು ವಾಟ್ಸಾಪ್ ಮೂಲಕ ಮೆಸೇಜ್ ಬಂದಿದೆ.

  ಹೆಚ್ಚಿನ ಹಣ ತೊಡಗಿಸಿದ್ದಲ್ಲಿ ಹೆಚ್ಚು ಲಾಭಗಳಿಸಬಹುದು ಎಂದು ಹೇಳಿ ಷೇರು ಟ್ರೇಡಿಂಗ್ ಬಗ್ಗೆ ಪ್ರೇರೇಪಿಸಿದ್ದಾರೆ. ಮೊದಲಿಗೆ 10,000ರೂ. ಹಣವನ್ನು ತೊಡಗಿಸಲು ತಿಳಿಸಿ ಇಂಡಸ್ ಇಂಡ್ ಬ್ಯಾಂಕ್ ಖಾತೆಯ ವಿವರವನ್ನು ಕಳುಹಿಸಿದ್ದಾರೆ. ಅದರಂತೆ ದೂರುದಾರರು ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ 10,000 ರೂ. ಹಣವನುಪಾವತಿಸಿರುತ್ತಾರೆ. ನಂತರ ಮಾ.15 ರಿಂದ ಜು.4ರ ವರೆಗೆ ದೂರಿನಲ್ಲಿ ನಮೂದಿಸಿರುವ ದೂರವಾಣಿ ನಂಬ್ರಗಳಿಂದ ವಾಟ್ಸಾಫ್ ಮೇಸೆಜ್ ಮೂಲಕ ಕಂಪೆನಿಯವರು ಎಂದು ಪರಿಚಯಿಸಿಕೊಂಡು ಷೇರು ಟ್ರೇಡಿಂಗ್ ನಲ್ಲಿ ಹಣ ತೊಡಗಿಸಲು ಹೇಳಿದ್ದರು. ದೂರುದಾರರು ಹಂತ ಹಂತವಾಗಿ ಅಪರಿಚಿತ ವ್ಯಕ್ತಿಯು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ 73,68,952 ರೂ. ಹಾಗೂ ಉಳಿದ 50,000 ರೂ. ಹಣವನ್ನು ಕಂಪೆನಿಯವರಿಗೆ ಪೋನ್ ಪೇ ಮೂಲಕ ಪಾವತಿಸಿರುತ್ತಾರೆ. ನಂತರ ಕಂಪೆನಿಯಿಂದ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾದ್ಯವಾಗದೇ ಇದ್ದುದರಿಂದ ಅನುಮಾನ ಬಂದು ತನ್ನ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ಗಮನಕ್ಕೆ ಬಂದು ಪ್ರಕರಣ ದಾಖಲಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply