LATEST NEWS
ಪ್ರಧಾನಿ ಕಚೇರಿ ಅಧಿಕಾರಿಯೆಂದು ಪೋಸ್ ಕೊಟ್ಟು ಕಾಶ್ಮೀರದಲ್ಲಿ Z+ ಸೆಕ್ಯುರಿಟಿ ಜೊತೆ ರಾಜಾತಿಥ್ಯ ಪಡೆದ ಕಾಮನ್ ಮ್ಯಾನ್

ಕಾಶ್ಮೀರ ಮಾರ್ಚ್ 17: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪ್ರಧಾನ ಮಂತ್ರಿ ಕಚೇರಿಯಲ್ಲಿ (ಪಿಎಂಒ) ಉನ್ನತ ಅಧಿಕಾರಿಯಂತೆ ನಟಿಸಿ ಕೇಂದ್ರಾಡಳಿತ ಪ್ರದೇಶದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಯನ್ನು ಕಿರಣ್ ಭಾಯ್ ಪಟೇಲ್ ಎಂದು ಗುರುತಿಸಲಾದ ಆರೋಪಿ ತನ್ನನ್ನು ಪಿಎಂಒದಲ್ಲಿ ಹೆಚ್ಚುವರಿ ನಿರ್ದೇಶಕ ಎಂದು ಹೇಳಿಕೊಂಡು ಕಳೆದ ವರ್ಷ ಅಕ್ಟೋಬರ್‌ನಿಂದ ಕಾಶ್ಮೀರ ಕಣಿವೆಗೆ ಭೇಟಿ ನೀಡುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೆ ಕಾಶ್ಮೀರದಲ್ಲಿ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಲ್ಲದೇ ಸ್ಥಳೀಯ ಆಡಳಿತ ವ್ಯಕ್ತಿಗೆ ಝಡ್ ಪ್ಲಸ್ ಸೆಕ್ಯುರಿಟಿ, ಬುಲೆಟ್ ಪ್ರೂಫ್ ಎಸ್‌ಯುವಿ ಕಾರು ಮತ್ತು ಜಮ್ಮು ಮತ್ತು ಕಾಶ್ಮೀರದ ಪಂಚತಾರಾ ಹೋಟೆಲ್‌ನಲ್ಲಿ ಅಧಿಕೃತ ವಸತಿಯನ್ನು ಸಹ ನೀಡಿತ್ತು.

ಮಾರ್ಚ್ 3 ರಂದು ಕಾಶ್ಮೀರ ಕಣಿವೆಗೆ ಅವರ ಮೂರನೇ ಭೇಟಿಯಲ್ಲಿ ಪಟೇಲ್ ಅವರನ್ನು ಭದ್ರತಾ ಅಧಿಕಾರಿಗಳು ಬಂಧಿಸಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಶ್ರೀನಗರದ ಪಂಚತಾರಾ ಹೋಟೆಲ್‌ನಲ್ಲಿ ಕೇಂದ್ರದಲ್ಲಿ ‘ಹೆಚ್ಚುವರಿ ಕಾರ್ಯದರ್ಶಿ’ ಎಂದು ಪೋಸ್ ನೀಡಿದ್ದಕ್ಕಾಗಿ ಮತ್ತು ಇತರ ಆತಿಥ್ಯದ ಜೊತೆಗೆ ಭದ್ರತಾ ಕವರ್ ಅನುಭವಿಸಿದ್ದಕ್ಕಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟಾರೆಯಾಗಿ ಇಡೀ ಜಮ್ಮು ಕಾಶ್ಮೀರದ ಪೊಲೀಸರನ್ನು ಮೂರ್ಖನನ್ನಾಗಿ ಮಾಡಿ ಸಾಮಾನ್ಯ ಮನುಷ್ಯನೊಬ್ಬ ರಾಜಾತಿಥ್ಯವನ್ನುು ಬರೋಬ್ಬರಿ ಮೂರರಿಂದ ನಾಲ್ಕು ಬಾರಿ ಅನುಭವಿಸಿದ್ದಾನೆ.