DAKSHINA KANNADA
ಯುವತಿಯೊಂದಿಗೆ ಸ್ನೇಹಕ್ಕೆ ಹಿಂದೂ ಎಂದು ನಾಟಕ…!!
ಮಂಗಳೂರು ನವೆಂಬರ್ 13: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ನಕಲಿ ಹೆಸರನ್ನು ಬಳಸಿ ಹಿಂದೂ ಎಂದು ನಂಬಿಸಿ ಯುವತಿಯೊಂದಿಗೆ ಸ್ನೇಹ ಮಾಡಿ ದೇವಸ್ಥಾನದಲ್ಲಿ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಬ ತಾಲೂಕು ಬಂಟ್ರ ಗ್ರಾಮದ ನಿವಾಸಿ ಅಬ್ದುಲ್ ರಜಾಕ್(25) ಎಂಬಾತ ತನ್ನ ಹೆಸರನ್ನು ಖುಷಿಕ್ ಯಾನೆ ಸಂಜು ಎಂದು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಠಿಸಿ ಯವತಿಯೊಬ್ಬಳೊಂದಿಗೆ ಸ್ನೇಹ ಸಂಪಾದಿಸಿದ್ದ, ಈ ಯುವಕನ ಮಾತು ನಂಬಿದ ಯುವತಿ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ ಬಳಿಕ ವಾಟ್ಸಾಪ್ ನಲ್ಲಿ ನಿರಂತರ ಸಂಪರ್ಕದಲ್ಲಿದ್ದರು.
ಈ ನಡುವೆ ಯುವತಿ ಆರೋಪಿ ರಜಾಕ್ ನೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಳು. ಈ ವೇಳೆ ಹಣೆ ತುಂಬಾ ದೇವರ ಪ್ರಸಾದವನ್ನು ನಾಮ ಬಳಿದು ಯುವತಿಯೊಂದಿಗೆ ಫೋಟೋ ತೆಗೆಸಿಕೊಂಡಿದ್ದ ರಜಾಕ್ ಬಳಿಕ ಆ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಪರಿಶೀಲಿಸಿದಾಗ ಆರೋಪಿ ಮುಸ್ಲಿಂ ಸಮುದಾಯವನು ಎಂದು ತಿಳಿದುಬಂದಿದೆ. ದುರುದ್ದೇಶಪೂರಿತವಾಗಿ ಈ ಕೃತ್ಯವೆಸಗಿರುವುದು, ಸುಳ್ಳು ಹೇಳಿ ವಂಚಿಸಿದ ಕಾರಣಕ್ಕೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಆರೋಪಿಯು ಕನಕರಾಜು ಎಂಬ ಹೆಸರಿನಲ್ಲೂ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಹೊಂದಿದ್ದಾನೆ ಎಂದು ಪೊಲೀಸ್ ಮೂಲಗಳು ಹೇಳಿವೆ.