LATEST NEWS
ಶಕ್ತಿನಗರ ಮುಖ್ಯ ರಸ್ತೆಯ ಮಹಾಕಾಳಿ ಜಂಕ್ಷನ್ ನಿಂದ ವಾಹನ ಸಂಚಾರ ನಿಷೇಧ
ಮಂಗಳೂರು ನವೆಂಬರ್ 13 :ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮತ್ತೊಂದು ರಸ್ತೆ ಕಾಂಕ್ರೀಟಿಕರಣ ಹಿನ್ನಲೆ ಬಂದ್ ಆಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪದವು ಸೆಂಟ್ರಲ್ 35ನೇ ವಾರ್ಡ್ ಶಕ್ತಿನಗರ ಮುಖ್ಯ ರಸ್ತೆಯ ಮಹಾಕಾಳಿ ಜಂಕ್ಷನ್ ನಿಂದ ಶಕ್ತಿನಗರ ಸ್ಮಶಾನ ದ್ವಾರದವರೆಗೆ 250 ಮೀ. ಉದ್ದಕ್ಕೆ ರಸ್ತೆ ಅಭಿವೃದ್ಧಿಪಡಿಸಿ ಕಾಂಕ್ರೀಟೀಕರಣಗೊಳಿಸುವ ಕಾಮಗಾರಿ ಆರಂಭವಾಗಲಿರುವ ಹಿನ್ನಲೆ ಬದಲಿ ಮಾರ್ಗದ ವ್ಯವಸ್ಥೆ ಮಾಡಿ ಮಂಗಳೂರು ಪೊಲೀಸ್ ಆಯುಕ್ತರು ವಿಕಾಶ್ ಕುಮಾರ್ ವಿಕಾಶ್ ಆದೇಶ ಹೊರಡಿಸಿದ್ದಾರೆ.
ಶಕ್ತಿನಗರ ಮುಖ್ಯ ರಸ್ತೆ ಮಹಾಕಾಳಿ ಜಂಕ್ಷನ್ ನಿಂದ ಶಕ್ತಿನಗರ ಸ್ಮಶಾನ ದ್ವಾರದವರೆಗೆ ನವೆಂಬರ್ 12 ರಿಂದ ಜನವರಿ 10 ರವರೆಗೆ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ. ಶಕ್ತಿನಗರ ಕ್ರಾಸ್ ನಿಂದ ಸ್ಮಶಾನ ರಸ್ತೆಯಾಗಿ ಕಂಡೆಟ್ಟು ಬಿಕರ್ನಕಟ್ಟೆ ಕ್ರಾಸ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳನ್ನು ಶಕ್ತಿನಗರ ಸ್ಮಶಾನದ ಬಳಿ ನಿಷೇಧಿಸಲಾಗಿದೆ. ಬಿಕರ್ನಕಟ್ಟೆ ಕ್ರಾಸ್, ಕಂಡೆಟ್ಟು ಪಾಂಡುರಂಗ ಭಜನಾ ಮಂದಿರದಿಂದ ಸ್ಮಶಾನ ರಸ್ತೆಯಾಗಿ ಶಕ್ತಿನಗರ ಕ್ರಾಸ್ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳಿಗೆ ಅವಕಾಶ ನೀಡಿ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮೇಲಿನ ಈ ನಿರ್ಬಂಧನೆಗಳು ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ ಎಂದು ಮಂಗಳೂರು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.