Connect with us

    LATEST NEWS

    ನಕಲಿ ಫೇಸ್ ಬುಕ್ ಖಾತೆಯಲ್ಲಿ ಸೌದಿ ದೊರೆ ವಿರುದ್ದ ಪೋಸ್ಟ್ – ಬಂಧನದಲ್ಲಿರುವ ಹರೀಶ್ ಬಂಗೇರ ಅಗಸ್ಟ್ 18ಕ್ಕೆ ತಾಯ್ನಾಡಿಗೆ

    ಕುಂದಾಪುರ ಅಗಸ್ಟ್ 14: ತನ್ನದಲ್ಲದ ತಪ್ಪಿಗೆ ಸೌದಿ ಅರೇಬಿಯಾ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಹರೀಶ್ ಬಂಗೇರ ಅವರ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಅಗಸ್ಟ್ 18 ರಂದು ಭಾರತಕ್ಕೆ ಮರಳಲಿದ್ದಾರೆ.

    ಕೋಟೇಶ್ವರದ ಗೋಪಾಡಿ ಗ್ರಾಮದ ಹರೀಶ್‌ ಬಂಗೇರಾ ಎಸ್‌. ಅವರ ಹೆಸರಲ್ಲಿ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿತ್ತು. ಈ ಖಾತೆಯಲ್ಲಿ ಸೌದಿ ಅರೇಬಿಯಾ ದೊರೆ ವಿರುದ್ಧ ಫೋಸ್ಟ್‌ ಮಾಡಲಾಗಿತ್ತು. ಈ ಪೋಸ್ಟ್‌ ಮಾಡಿದವರು ಬಂಗೇರಾ ಎಂದೇ ಭಾವಿಸಿದ್ದ ಸೌದಿ ಪೊಲೀಸರು ಬಂಗೇರಾ ಅವರನ್ನು ಬಂಧಿಸಿದ್ದರು.

    ಇದೀಗ ಹರೀಶ್‌ ಬಂಗೇರ ಎಸ್‌. ಅವರ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಇದೇ ಆ.17ರಂದು ಅಲ್ಲಿಂದ ಹೊರಡಲಿದ್ದು ಆ. 18ರಂದು ಭಾರತಕ್ಕೆ ಮರಳಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಹರೀಶ್ ಅವರು ತಾಯ್ನಾಡಿಗೆ ಮರಳಲು ಪೂರೈಸಬೇಕಾಗಿದ್ದ ವಿಧಿ ವಿಧಾನಗಳು ಪೂರ್ಣಗೊಂಡಿದ್ದು ಆ.17ರಂದು ಹೊರಟು ಆ.18 ರಂದು ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *