LATEST NEWS
19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಖೋಟಾ ನೋಟು ಸಾಗಾಟದ ಆರೋಪಿ ಅರೆಸ್ಟ್

ಪುತ್ತೂರು ಸೆಪ್ಟೆಂಬರ್ 10: ಖೋಟಾ ನೋಟು ಸಾಗಾಟ ಪ್ರಕರಣದಲ್ಲಿ ಕಳೆದ 19 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಾಸರಗೋಡು ಮುಳಿಯಾರ್ ಬೋವಿಕ್ಕಾನ ಪರಪಿಡಕ ನಿವಾಸಿ ಸಿದ್ದಿಕಾ ಯಾನೆ ಕಲಂದರ್ ಸಿದ್ದಿಕ್ (41) ಎಂದು ಗುರುತಿಸಲಾಗಿದೆ.
2002ರಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಆರೋಪಿಯ ಮೇಲೆ ವಾರಂಟ್ ಜಾರಿಗೊಳಿಸಿತ್ತು.
ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ಈತ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪುತ್ತೂರು ಪೊಲೀಸರು ಈತನನ್ನು ಬಂಧಿಸಿದ್ದಾರೆ.
