Connect with us

BANTWAL

ಬಹಳ ಜಾಣರು ಬಂಟ್ವಾಳ ಬಿಸಿ ರೋಡಿನ ಪಿಕ್ ಪಾಕೆಟ್ ಕಳ್ಳರು ..!

ಬಂಟ್ವಾಳ : ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಬಸ್ ಕಾಯುವ ವೇಳೆ ಪಿಕ್ ಪಾಕೆಟ್ ಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.


ಬೈಪಾಸ್ ನಿವಾಸಿ ಅಕ್ಷಿತಾ ಎಂಬವರು ಬಿಸಿರೋಡಿನಿಂದ ಮನೆಗೆ ಹೋಗುವ ಉದ್ದೇಶದಿಂದ ಬಸ್ ಸ್ಟ್ಯಾಂಡ್ ನಲ್ಲಿ ಧರ್ಮಸ್ಥಳ ಬಸ್ ಕಾಯುತ್ತಿದ್ದ ವೇಳೆ ಇವರ ಬ್ಯಾಗ್ ನೊಳಗೆ ಇರಿಸಲಾಗಿದ್ದ ಮೊಬೈಲ್ ಪೋನ್ ಕಳವಾಗಿದೆ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇವರ ಜೊತೆ ನಾವೂರದ ಇನ್ನೋರ್ವ ಯುವತಿಯ ಮೊಬೈಲ್ ಕೂಡ ಇದೇ ಜಾಗದಲ್ಲಿ ಕಳವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಲ್ಲಿನ ತರಕಾರಿ ಅಂಗಡಿಯ ಮಾಲಕ ವೆಂಕಟೇಶ್ ಎಂಬವರ ಮೊಬೈಲ್ ಅಂಗಡಿಯಿಂದ ನಿನ್ನೆ ಸಂಜೆ ವೇಳೆ ಕಳವಾಗಿದೆ. ಹೀಗೆ ನಿತ್ಯ ಅನೇಕ ಮೊಬೈಲ್ ಸಹಿತ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ನಗರ ಪೋಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಪಿಕ್ ಪಾಕೆಟ್ ನಡೆಯುತ್ತಿರುವುದು ಬೇಸರ ತರುವ ವಿಚಾರ.
ಇನ್ನೂ ಈ ಭಾಗದಲ್ಲಿ ಟ್ರಾಫಿಕ್ ಪೋಲೀಸರು ಕಾರ್ಯನಿರ್ವಹಿಸುತ್ತಿದ್ದರು ಕಳ್ಳರಿಗೆ ಯಾರ ಹೆದರಿಕೆಯೂ ಇಲ್ಲದೆ ಕಳೆದ ಕೆಲವು ದಿನಗಳಿಂದ ತಮ್ಮ ಕೆಲಸವನ್ನು ಅತ್ಯಂತ ನಾಜೂಕಿನಿಂದ ಮಾಡಿ ಮುಗಿಸುತ್ತಿದ್ದಾರೆ.
ಎರಡು ದಿನಗಳ ಹಿಂದೆ ಬಸ್ ಪ್ರಯಾಣಿಕರೋರ್ವರ ಕಿಸೆಯಿಂದ ಪರ್ಸ್ ಎಗರಸಿ ಬಳಿಕ ಟ್ರಾಫಿಕ್ ಪೋಲೀಸರ ಬಲೆಗೆ ಬಿದ್ದಿದ್ದ.
‌ ಇದರ ಜೊತೆಗೆ ಬಸ್ ನಿಲ್ದಾಣದ ಮುಂಭಾಗದ ಪ್ಲೈ ಓವರ್ ನ‌ ಅಡಿಭಾಗದಲ್ಲಿ ನಿಲ್ಲಿಸಲಾಗಿರುವ ಅನೇಕ ದ್ವಿ ಚಕ್ರಗಳ ವಾಹನಗಳ ಕಳವು ಕೂಡ ನಡೆದಿದೆ.
ಪಿಕ್ ಪಾಕೆಟ್ ನಡುವೆ ಕೆಲ ದಿನಗಳಿಂದ ಅಂಗಡಿಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿರುವುದು ಕಂಡು ಬಂದಿದ್ದು, ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *