Connect with us

PUTTUR

ಕೆಸರು ಗದ್ದೆಗಿಳಿದು ನಾಟಿ ಮಾಡಿದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ…!!

ಪುತ್ತೂರು ಜುಲೈ 15: ಪುತ್ತೂರಿನ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್‌ ನಾಯಕಿಯಾಗಿರುವ ಶಕುಂತಲಾ ಶೆಟ್ಟಿ ಅವರ ನಾಟಿ ಮಾಡುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೆಸರಿನ ಗದ್ದೆಗಿಳಿದು ಸ್ವತಃ ಭತ್ತ ನಾಟಿ ಮಾಡಿ ಮಾಡಿ ಯಾವಾಗಲೂ ಶಾಂತ ಹಾಗೂ ಸರಳ ಸ್ವಭಾವದ ಶಕುಂತಲಾ ಶೆಟ್ಟಿ ಸುದ್ದಿಯಾಗಿದ್ದಾರೆ.

ಕೊರೊನಾ ಕಾರಣ ಮನೆಯಲ್ಲೇ ಉಳಿದಿದ್ದ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ವೃತ್ತಿ ಪರ ನಾಟಿ ಮಾಡುವ ಮಹಿಳೆಯಂತೆ ಬಟ್ಟೆಯುಟ್ಟು ಕುಟುಂಬದ ಸದಸ್ಯರೊಂದಿಗೆ ಗದ್ದೆ ಇಳಿದು ಭತ್ತರ ಪೈರನ್ನು ನಾಟಿ ಮಾಡಿದ್ದಾರೆ. ಪ್ರಸ್ತುತ ಶಕು ಅಕ್ಕನವರ ಈ ನಾಟಿ ವಿಡಿಯೋ ಸುದ್ದಿ ಮಾಡಿದ್ದು ಹಿರಿಯ ರಾಜಕರಣಿಯ ವಿಡಿಯೋ ವೈರಲ್‌ ಆಗಿದೆ.