Connect with us

LATEST NEWS

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈಗೆ ಗೇಟ್ ಪಾಸ್ ಸಾಧ್ಯತೆ…?

ಚೆನ್ನೈ ಎಪ್ರಿಲ್ 01: ತಮಿಳುನಾಡಿನಲ್ಲಿ ಬಿಜೆಪಿ ಪಕ್ಷಕ್ಕೆ ಒಂದು ಇಮೇಜ್ ತಂದು ಕೊಟ್ಟಿದ್ದ ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾದ್ಯತೆ ಇದೆ ಎಂದು ವರದಿಯಾಗಿದೆ.


2026ರಲ್ಲಿ ತಮಿಳು ನಾಡಿನಲ್ಲಿ ಚುನಾವಣೆ ಹಿನ್ನಲೆ ಜಾತಿ ಲೆಕ್ಕಾಚಾರದ ವಿಚಾರವಾಗಿ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 2026ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವ ಸಾಧ್ಯತೆ ಹಿನ್ನಲೆ ಬಿಜೆಪಿ ಹೈಕಮಾಂಡ್ ಸದ್ಯ ಜಾತಿ ಲೆಕ್ಕಾಚಾರದಲ್ಲಿ ತೊಡಗಿದೆ. ಅಣ್ಣಾಮಲೈ ಅವರಂತೆಯೇ, ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಕೂಡ ಪ್ರಬಲ ಹಿಂದುಳಿದ ಸಮುದಾಯಕ್ಕೆ ಸೇರಿದವರು.

ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪಳನಿಸ್ವಾಮಿ ಅವರನ್ನು ಭೇಟಿಯಾಗಿದ್ದರು. ಅಲ್ಲದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆಸಿದ ಸಭೆಯಲ್ಲಿ ಅಣ್ಣಾಮಲೈ ಅವರಿಗೆ ಈ ವಿಷಯವನ್ನು ತಿಳಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಜೆಪಿ ಮತ್ತು ಎಐಎಡಿಎಂಕೆ ಪುನರ್ಮಿಲನದತ್ತ ಮೊದಲ ಔಪಚಾರಿಕ ಹೆಜ್ಜೆಯಾಗಿ ಈ ವಿಷಯ ತಿಳಿಸಲಾಗಿದೆ . ರಾಜಕೀಯವಾಗಿ ಇದುವರೆಗಿನ ಯಶಸ್ಸು ಅಲ್ಲದಿದ್ದರೂ, ತಮಿಳುನಾಡಿನಲ್ಲಿ ಬಿಜೆಪಿಗೆ ಒಂದು ಇಮೇಜ್ ತಂದುಕೊಟ್ಟಿದ್ದು, ಅಣ್ಣಾಮಲೈ ಅವರ ಆಕ್ರಮಣಕಾರಿ ನಿಲುವು. ಸದ್ಯ ಅಣ್ಣಾಮಲೈ ಪಕ್ಷಕ್ಕೆ ಸಂಪೂರ್ಣ ನಿಷ್ಠೆಯನ್ನು ವ್ಯಕ್ತಪಡಿಸಿದ್ದಾರೆಂದು ನಂಬಲಾಗಿದೆ. “ಪಕ್ಷಕ್ಕೆ ತಮ್ಮ ಬದ್ಧತೆಯ ಬಗ್ಗೆ ತಮಗೆ ಯಾವುದೇ ಎರಡನೇ ಆಲೋಚನೆ ಇಲ್ಲ ಮತ್ತು ಕೇವಲ ಕಾರ್ಯಕರ್ತರಾಗಿ ಕೆಲಸ ಮಾಡಲು ಸಹ ಸಿದ್ಧರಿದ್ದಾರೆ ಎಂದು ಅವರು ತಿಳಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *