Connect with us

LATEST NEWS

ಮಿತಿಮೀರಿದ ರೀಲ್ಸ್ ಹುಚ್ಚು, 300 ಅಡಿ ಎತ್ತರದ ಫಾಲ್ಸ್​​ನಿಂದ ಬಿದ್ದು ಇನ್​ಸ್ಟಾ ತಾರೆ ಮೃತ್ಯು..!

ರಾಯಗಡ: ಯುವ ಜನಾಂಗದಲ್ಲಿ ರೀಲ್ಸ್ ಹುಚ್ಚು ಮಿತಿ ಮೀರಿ ಹೋಗಿದ್ದು ಅನೇಕರು ಪ್ರಾಣ ಕಳಕೊಂಡಿದ್ದರೆ ಆನೇಕ ಕುಟುಂಬಗಳಲ್ಲಿ ಬಿರುಕುಗಳು ಮೂಡಿವೆ. ಇದೀಗ ಇಂತಹುದೇ ಹುಚ್ಚಿಗೆ ಯುವತಿಯೊಬ್ಬಳು ಪ್ರಾಣ ಕಳಕೊಂಡಿದ್ದಾಳೆ.

ಖ್ಯಾತ ಇನ್ಸ್‌ಸ್ಟಾ ತಾರೆ ಅನ್ವಿ ಕಾಮ್ದಾರ್ (26) ರಾಯಗಡ ಬಳಿಯ ಕುಂಭೆ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ. ಮುಂಬೈ ನಿವಾಸಿಯಾಗಿರುವ ಅನ್ವಿ ರೀಲ್ಸ್​ ಮಾಡುವಾಗ 300 ಎತ್ತರದಿಂದ ಆಯಾ ತಪ್ಪಿ ಬಿದ್ದು ಪ್ರಾಣಕಳಕೊಂಡಿದ್ದಾರೆ.  ಜುಲೈ 16ರಂದು ಅನ್ವಿ ತನ್ನ 7 ಸ್ನೇಹಿತರೊಂದಿಗೆ ಜಲಪಾತಕ್ಕೆ ಪ್ರವಾಸವನ್ನು ಕೈಗೊಂಡಿದ್ದರು. ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ವಿಡಿಯೊ ಚಿತ್ರೀಕರಣ ಮಾಡುವಾಗ ಅನ್ವಿ ಆಳವಾದ ಕಂದಕಕ್ಕೆ ಜಾರಿ ಬಿದ್ದಿದ್ದಾರೆ.


ಈ ವಿಷಯ ತಿಳಿದ ಕೂಡಲೇ ಸ್ಥಳೀಯ ಅಧಿಕಾರಿಗಳು  ರಕ್ಷಣಾ ತಂಡದೊಂದಗೆ ಸ್ಥಳಕ್ಕೆ ದೌಡಾಯಿಸಿದ್ದರು.  ಸುಮಾರು 300-350 ಅಡಿಗಳಷ್ಟು ಎತ್ತರದಿಂದ ಬಿದ್ದಿದ್ದರಿಂದ  ಗಂಭೀರವಾಗಿ ಗಾಯಗೊಂಡಿದ್ದಳು. ಧಾರಾಕಾವಾಗಿ ಮಳೆಯಾಗುತ್ತಿದ್ದರಿಂದ ಅವಳನ್ನು ಮೇಲಕ್ಕೆತ್ತಲು ರಕ್ಷಣಾ ತಂಡಕ್ಕೆ  ಕಷ್ಟವಾಯಿತು. ಸತತ ಆರು ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಆಕೆಯನ್ನು ಮೇಲೆ ಕರೆದಕೊಂಡು ಬಂದು ಮನಗಾಂವ ಉಪ ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *